ಕ್ಲಾಸೆನ್ ಹೋರಾಟ ವ್ಯರ್ಥ: ಪಂತ್ ನಾಯಕತ್ವದಲ್ಲಿ LSG ಗೆ ಜಯ

ಹೈದರಾಬಾದ್: ಐಪಿಎಲ್ 2026 ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 156 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ವೇಗದ ಬೌಲರ್ ಮಹಮ್ಮದ್ ಶಮಿ ದಾಳಿಯಿಂದ ಎಸ್‌ಆರ್‌ಎಚ್ ತಂಡ ಸಂಕಷ್ಟಕ್ಕೀಡಾಯಿತು.

ಇದನ್ನೂ ಓದಿ ಇರಾನ್ ಮೇಲಿನ ದಾಳಿ: ಪತನಗೊಂಡ ಯುದ್ಧ ವಿಮಾನದಲ್ಲಿದ್ದ ಪೈಲಟ್ ರಕ್ಷಿಸಿದ ಅಮೆರಿಕ ಪಡೆ

ಅವರು 4 ಓವರ್‌ಗಳಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು. ಆದರೆ ಮಧ್ಯ ಕ್ರಮದಲ್ಲಿ ಹೆನ್ರಿಚ್ ಕ್ಲಾಸನ್ (62) ಮತ್ತು ನಿತೀಶ್ ಕುಮಾರ್ ರೆಡ್ಡಿ (56) ಉತ್ತಮ ಆಟದ ಮೂಲಕ ತಂಡವನ್ನು  ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

156 ರನ್ ಗುರಿ ಬೆನ್ನಟ್ಟಿದ ಲಖ್ನೌ ತಂಡ ಆರಂಭದಲ್ಲಿ ಸಮತೋಲನ ಕಾಪಾಡಿತು. ನಾಯಕ ರಿಷಬ್ ಪಂತ್ ಅತ್ಯಂತ ಶಾಂತ ಮತ್ತು ಜವಾಬ್ದಾರಿಯುತ ಆಟವಾಡಿ 68* ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಕೊನೆಯ ಓವರ್‌ನಲ್ಲಿ ಪಂತ್ ಸತತ ಬೌಂಡರಿಗಳು ಬಾರಿಸಿ, ಕೇವಲ ಒಂದು ಬಾಲ್ ಬಾಕಿ ಇರುವಾಗಲೇ ಪಂದ್ಯವನ್ನು ಮುಕ್ತಾಯಗೊಳಿಸಿದರು

ಈ ಮೂಲಕ ಲಖ್ನೌ ತಂಡ ಐಪಿಎಲ್ 2026ರಲ್ಲಿ ತನ್ನ ಮೊದಲ ಜಯವನ್ನು ದಾಖಲಿಸಿತು.ಶಮಿ ಬೌಲಿಂಗ್ ಮತ್ತು ಪಂತ್ ನಾಯಕತ್ವದ ಆಟ ಲಖ್ನೌಗೆ ಮಹತ್ವದ ಜಯ ತಂದುಕೊಟ್ಟಿದ್ದು, ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು