ನಟಿ ಸುಭಾಷಿಣಿ ಆತ್ಮಹತ್ಯೆ: ವಿಡಿಯೋ ಕಾಲ್‌ನಲ್ಲೇ ಪತಿ ಎದುರು ನೇಣಿಗೆ ಶರಣು!

ಚೆನ್ನೈ: ತಮಿಳು ಕಿರುತೆರೆ ಮತ್ತು ಬೆಳ್ಳಿತೆರೆಯ ಪೋಷಕ ನಟಿ ಸುಭಾಷಿಣಿ ಅಲಿಯಾಸ್ ಸಾಸ್ವಿಬಾಲಾ (Subhashini alias Sasvibala) ಅವರು ಚೆನ್ನೈನ ತಮ್ಮ ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ಕ್ಷಣದಲ್ಲಿ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಮೂಲತಃ ಶ್ರೀಲಂಕಾದವರಾದ ಸುಭಾಷಿಣಿ ಅವರು 2024ರಲ್ಲಿ ಬೆಂಗಳೂರು ಮೂಲದ ಬಿಪಿನ್ ಚಂದ್ರನ್ ಅವರನ್ನು ವಿವಾಹವಾಗಿದ್ದರು. ಸಿನಿಮಾ ಚಿತ್ರೀಕರಣದ ಉದ್ದೇಶಕ್ಕಾಗಿ ಚೆನ್ನೈನ ಪೋರೂರು ಬಳಿಯ ಅಯ್ಯಪ್ಪಂತಂಗಲ್‌ನಲ್ಲಿ ಅಪಾರ್ಟ್ಮೆಂಟ್‌ವೊಂದನ್ನು ಬಾಡಿಗೆಗೆ ಪಡೆದು ವಾಸವಿದ್ದರು. ಏಪ್ರಿಲ್ 5ರ ಭಾನುವಾರ ರಾತ್ರಿ ಪತಿ ಬಿಪಿನ್ ಚಂದ್ರನ್ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ.

Advertisement

ಜಗಳ ವಿಕೋಪಕ್ಕೆ ಹೋದಾಗ, ಸುಭಾಷಿಣಿ ಅವರು ವಿಡಿಯೋ ಕಾಲ್ ಚಾಲನೆಯಲ್ಲಿರುವಾಗಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಪತಿ ಬಿಪಿನ್ ತಕ್ಷಣವೇ ಅಪಾರ್ಟ್ಮೆಂಟ್ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬಾಗಿಲು ಒಡೆದು ಒಳಬರುವಷ್ಟರಲ್ಲಿ ಸುಭಾಷಿಣಿ ಪ್ರಾಣಪಕ್ಷಿ ಹಾರಿಹೋಗಿತ್ತು. ಸ್ಥಳಕ್ಕೆ ಧಾವಿಸಿದ ಪೋರೂರು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: ರಾಘವ್‌ ಛಡ್ಡಾ ಬೆಂಬಲಕ್ಕೆ ನಿಂತ ನಟಿ ಪ್ರಿಯಾಂಕಾ ಚೋಪ್ರಾ! ದಿಶಾ ಪಟಾನಿ ಸಹೋದರಿಯಿಂದಲೂ ಬೆಂಬಲ

Advertisement

ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಪ್ರಾಥಮಿಕ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ದಂಪತಿಗಳ ನಡುವೆ ಕಳೆದ ಕೆಲವು ದಿನಗಳಿಂದ ಸರಿ ಇರಲಿಲ್ಲವೇ ಎಂಬ ಬಗ್ಗೆ ಪೊಲೀಸರು ಬಿಪಿನ್ ಚಂದ್ರನ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸುಭಾಷಿಣಿ ಅವರು ಹಲವು ಜನಪ್ರಿಯ ತಮಿಳು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು