IPL: ಮುಂಬೈ ವಿರುದ್ಧ ಜೈಸ್ವಾಲ್ ಮಿಂಚಿನಾಟ; ರಾಜಸ್ಥಾನಕ್ಕೆ ರಾಯಲ್ ಗೆಲುವು

ಬರ್ಸಪುರ ಕ್ರೀಡಾಂಗಣದಲ್ಲಿ ಮಳೆಯ ಕಾರಣದಿಂದ ತಡವಾಗಿ ಆರಂಭವಾದ ಐಪಿಎಲ್‌ನ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 28 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಸಂಜೆ 7.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣದಿಂದ ತಡವಾಗಿ ಆರಂಭಗೊಂಡಿತು. ಹೀಗಾಗಿ 20 ಓವರ್‌ಗಳ ಬದಲಾಗಿ ಪಂದ್ಯವನ್ನು 11 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 11 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತು. ತಂಡದ ಪರ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 32 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಅಜೇಯ 77 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, 14 ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿ 39 ರನ್ ಗಳಿಸಿದರು.

ಇದನ್ನೂ ಓದಿ: IPL: ತವರಿನಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಡೇವಿಡ್ ಸ್ಫೋಟಕ ಬ್ಯಾಟಿಂಗ್, CSK ವಿರುದ್ಧ RCBಗೆ ಭರ್ಜರಿ ಗೆಲುವು

ಇತರ ಬ್ಯಾಟ್ಸ್‌ಮನ್‌ಗಳಲ್ಲಿ ಧ್ರುವ್ ಜುರೆಲ್ 1, ರಿಯಾನ್ ಪರಾಗ್ 20, ಶಿಮ್ರಾನ್ ಹೆಟ್ಮೆಯರ್ 6 ರನ್ (ಅಜೇಯ) ಗಳಿಸಿದರು. ಮುಂಬೈ ಪರ ಅಲ್ಲಾ ಗಜನ್ಫರ್ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.

151 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ನಮನ್ ಧೀರ್ 25 ಹಾಗೂ ಶೆರ್ಫೇನ್ ರುದರ್ಫೋರ್ಡ್ 25 ರನ್ ಗಳಿಸಿ ಹೋರಾಟ ನಡೆಸಿದರು.

ಉಳಿದಂತೆ ರಯಾನ್ ರಿಕಲ್ಟನ್ 8, ರೋಹಿತ್ ಶರ್ಮಾ 5, ಸೂರ್ಯಕುಮಾರ್ ಯಾದವ್ 6, ತಿಲಕ್ ವರ್ಮಾ 14, ಹಾರ್ದಿಕ್ ಪಾಂಡ್ಯ 9, ಶಾರ್ದೂಲ್ ಠಾಕೂರ್ 8, ದೀಪಕ್ ಚಹಾರ್ 6 (ಅಜೇಯ), ಟ್ರಂಟ್ ಬೋಲ್ಟ್ 1, ಜಸ್ಪ್ರೀತ್ ಬುಮ್ರಾ 5 (ಅಜೇಯ) ರನ್ ಗಳಿಸಿದರು.

ರಾಜಸ್ಥಾನ ಪರ ರವಿ ಬಿಷ್ಣೋಯ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ ತಲಾ 2 ವಿಕೆಟ್ ಪಡೆದು ಮುಂಬೈ ಬ್ಯಾಟಿಂಗ್‌ನ್ನು ಕಟ್ಟಿ ಹಾಕಿದರು. ತುಷಾರ್ ದೇಶಪಾಂಡೆ ಹಾಗೂ ಜೋಫ್ರಾ ಆರ್ಚರ್ ತಲಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು