ಪುತ್ತೂರು: ಇನ್‌ಸ್ಪಿರೇಷನ್‌ ಪಿಯು ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ; ವಿದ್ಯಾರ್ಥಿವೇತನ ಪರೀಕ್ಷೆ ಬರೆಯಿರಿ, ಉಚಿತ ಪ್ರವೇಶ ಪಡೆಯಿರಿ

INSPIRATION PU COLLEGE Puttur

ಪುತ್ತೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಲವಾದ ಅಡಿಪಾಯ ಕಲ್ಪಿಸುವ ಉದ್ದೇಶದಿಂದ ಇನ್‌ಸ್ಪಿರೇಷನ್ ಪಿಯು ಕಾಲೇಜು ‘ಇನ್‌ಸ್ಪಿರೇಷನ್ ಅಲ್ಫಾ ವಿದ್ಯಾರ್ಥಿವೇತನ ಪರೀಕ್ಷೆ 2026–27’ ಅನ್ನು ಆಯೋಜಿಸಿದೆ.

ಈ ವಿದ್ಯಾರ್ಥಿವೇತನ ಪರೀಕ್ಷೆ ಏಪ್ರಿಲ್ 15 ರಂದು ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ನಡೆಯಲಿದೆ. ಒಟ್ಟು 60 ನಿಮಿಷಗಳ ಅವಧಿಯಲ್ಲಿ 60 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 10ನೇ ತರಗತಿಯ ರಾಜ್ಯ, CBSE ಹಾಗೂ ICSE ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಶ್ನೆಗಳು ಮುಖ್ಯವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳ ಆಧಾರಿತವಾಗಿರುತ್ತವೆ.

Advertisement

ಪರೀಕ್ಷಾ ಕೇಂದ್ರವು ಪುತ್ತೂರಿನ ಪೋಳ್ಯದಲ್ಲಿರುವ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎದುರಿನ ಇನ್‌ಸ್ಪಿರೇಷನ್ ಪಿಯು ಕಾಲೇಜಿನಲ್ಲಿ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪ್ರಥಮ 10 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಕಾಲೇಜು ಆಡಳಿತ ಪ್ರಕಟಿಸಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶವಾಗಿದೆ.

ಪ್ರವೇಶ ಪ್ರಕ್ರಿಯೆಯೂ ಪ್ರಾರಂಭ

ಇದರೊಂದಿಗೆ 2026–27 ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆಯೂ ಪ್ರಾರಂಭಗೊಂಡಿದ್ದು, ಕಾಲೇಜಿನಲ್ಲಿ PCMB (KCET + NEET) ಮತ್ತು PCMC (KCET + JEE) ಕೋರ್ಸ್‌ಗಳು ಲಭ್ಯವಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

Advertisement

ಇದನ್ನೂ ಓದಿ: ಐಪಿಎಲ್ ಹೈ ಪ್ರೊಫೈಲ್ ಪಂದ್ಯದ ಮೇಲೆ ಕಾಳಬಜಾರ್ ಕರಿಛಾಯೆ, ತನಿಖೆಗೆ ಇಳಿದ ಖಾಕಿ ಪಡೆ

ಕಾಲೇಜಿನ ಪ್ರಮುಖ ವೈಶಿಷ್ಟ್ಯ

ಕಾಲೇಜಿನ ಪ್ರಮುಖ ವೈಶಿಷ್ಟ್ಯಗಳಲ್ಲಿ ಪ್ರತಿ ವಿದ್ಯಾರ್ಥಿಗೆ ವೈಯಕ್ತಿಕ ಗಮನ, ಅನುಭವಸಂಪನ್ನ ಶಿಕ್ಷಕರಿಂದ ಬಲವಾದ ಶೈಕ್ಷಣಿಕ ಪಾಠ, ಶಿಸ್ತುಬದ್ಧ ಹಾಗೂ ವಿದ್ಯಾರ್ಥಿ ಸ್ನೇಹಿ ವಾತಾವರಣ, 2 ಎಕರೆ ವಿಶಾಲ ಹಸಿರು ಕ್ಯಾಂಪಸ್, ಆನ್-ಕ್ಯಾಂಪಸ್ ಹಾಸ್ಟೆಲ್ ಮತ್ತು ಬಸ್ ಸೌಲಭ್ಯಗಳಿವೆ.

Advertisement

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8105914003, 8762025875, 8792551517 ಸಂಖ್ಯೆಗಳನ್ನ ಸಂಪರ್ಕಿಸಬಹುದು ಅಥವಾ inspirationpucollege@gmail.com ಗೆ ಇಮೇಲ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್‌ಸ್ಪಿರೇಷನ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭವಿಷ್ಯವೇ ನಮ್ಮ ಆದ್ಯತೆ. ಗುಣಮಟ್ಟದ ಶಿಕ್ಷಣ, ಶಿಸ್ತು, ಮೌಲ್ಯಗಳು ಮತ್ತು ಅನುಭವಸಂಪನ್ನ ಉಪನ್ಯಾಸಕರ ಮಾರ್ಗದರ್ಶನದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸುಗಳನ್ನು ನನಸಾಗಿಸುವುದು ನಮ್ಮ ಧ್ಯೇಯವಾಗಿದೆ. ವಿದ್ಯಾಭ್ಯಾಸದ ಜೊತೆಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ನಾವು ಬದ್ಧರಾಗಿದ್ದೇವೆ.

ವಿಶ್ವನಾಥ್ ಶೇಷಾಚಲ, ಅಧ್ಯಕ್ಷರು, ಇನ್‌ಸ್ಪಿರೇಷನ್ ಪಿಯು ಕಾಲೇಜು

ಇನ್‌ಸ್ಪಿರೇಷನ್ ಪಿಯು ಕಾಲೇಜಿಗೆ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಉನ್ನತ ಗುಣಮಟ್ಟದ ಪಿಯು ವಿಜ್ಞಾನ ಶಿಕ್ಷಣ, ಶಿಸ್ತುಬದ್ಧ ವಾತಾವರಣ ಮತ್ತು ಮೌಲ್ಯಾಧಾರಿತ ಮಾರ್ಗದರ್ಶನದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೊಳಗಿನ ಪ್ರತಿಭೆಯನ್ನು ಅರಳಿಸಿ, ಅವರ ಕನಸುಗಳನ್ನು ಸಾಧನೆಯಾಗಿ ರೂಪಿಸುವುದು ನಮ್ಮ ಧ್ಯೇಯವಾಗಿದೆ. ಬೋರ್ಡ್ ಪರೀಕ್ಷೆಗಳು, NEET, KCET ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ತರಬೇತಿ ಒದಗಿಸಿ, ವಿದ್ಯಾರ್ಥಿಗಳು ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ ಯಶಸ್ಸಿನ ಶಿಖರ ತಲುಪುವಂತೆ ನಾವು ಬದ್ಧರಾಗಿದ್ದೇವೆ. ಜ್ಞಾನ, ಆತ್ಮವಿಶ್ವಾಸ ಮತ್ತು ಸತತ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಿ ಸಮಾಜಕ್ಕೆ ದಾರಿದೀಪರಾಗಲಿ ಎಂಬುದು ನಮ್ಮ ಸಂಕಲ್ಪ.

ಗುರುರಾಜ್, ವ್ಯವಸ್ಥಾಪಕ ನಿರ್ದೇಶಕರು, ಇನ್‌ಸ್ಪಿರೇಷನ್ ಪಿಯು ಕಾಲೇಜು, ಪುತ್ತೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು