Daily Horoscope: ನಿಮ್ಮ ಕೆಲಸದ ವೇಗ ಹೆಚ್ಚಲಿದೆ, ದೂರದ ಪ್ರಯಾಣದ ಯೋಗವಿದೆ

ಮೇಷ: ಉದ್ಯೋಗದಲ್ಲಿ ಸ್ವಲ್ಪ ಒತ್ತಡವಿರಲಿದೆ. ಸ್ನೇಹಿತರು ನಿಮ್ಮ ಏಳಿಗೆಗೆ ಸಹಕರಿಸುವರು. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ವೃಷಭ: ನಿಮ್ಮ ಕೆಲಸದ ವೇಗ ಹೆಚ್ಚಲಿದೆ. ದೂರದ ಪ್ರಯಾಣದ ಯೋಗವಿದ್ದು, ಕುಟುಂಬದ ಜೊತೆ ಕಾಲ ಕಳೆಯುವಿರಿ. ಮಾತಿನಲ್ಲಿ ಸ್ಪಷ್ಟತೆ ಇರಲಿ.

Advertisement

ಮಿಥುನ: ನಿಮ್ಮ ಅಚ್ಚರಿಯ ನಡವಳಿಕೆಯಿಂದ ಜಗತ್ತಿಗೆ ಅಚ್ಚರಿಯಾಗುತ್ತೀರಿ. ಸಾಧನೆಯ ಬಗ್ಗೆ ಆತಂಕವಿದ್ದರೂ, ಫಲಿತಾಂಶ ಉತ್ತಮವಾಗಿರುತ್ತದೆ.

ಕರ್ಕಾಟಕ: ಭೂಮಿ ಅಥವಾ ವಾಹನಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.

Advertisement

ಸಿಂಹ: ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಮಿತವಾದ ಮಾತು ಮತ್ತು ಆಹಾರದ ಮೇಲೆ ನಿಗಾ ಇರಲಿ. ಧೈರ್ಯದಿಂದ ಕೆಲಸಗಳನ್ನು ಪೂರ್ಣಗೊಳಿಸಿ.

ಕನ್ಯಾ: ಹೊಸ ಆಮಿಷಗಳಿಗೆ ಬಲಿಯಾಗಬೇಡಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಅಪರಿಚಿತರಿಂದ ದೂರವಿರುವುದು ಉತ್ತಮ.

Advertisement

ತುಲಾ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಕೆಲಸದಲ್ಲಿ ಸ್ಪಷ್ಟತೆ ಇರಲಿ. ಕುಟುಂಬದ ಸದಸ್ಯರ ಬೆಂಬಲ ನಿಮಗೆ ಶ್ರೀರಕ್ಷೆಯಾಗಲಿದೆ.

ವೃಶ್ಚಿಕ: ಜಟಿಲವಾಗಿದ್ದ ಸಮಸ್ಯೆಗಳು ಇಂದು ಸುಲಭವಾಗಿ ಬಗೆಹರಿಯಲಿವೆ. ಆಹಾರದಲ್ಲಿ ವ್ಯತ್ಯಾಸದಿಂದ ಆರೋಗ್ಯ ಏರುಪೇರಾಗಬಹುದು, ಎಚ್ಚರ.

ಧನು: ನಿಮ್ಮ ರಾಶಿಯಲ್ಲಿ ಚಂದ್ರನ ಸಂಚಾರವಿರುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಆಕಸ್ಮಿಕ ಲಾಭದ ಸಾಧ್ಯತೆಗಳಿವೆ.

ಮಕರ: ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗದ ಒತ್ತಡವಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ.

ಕುಂಭ: ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗಿದರೂ ಯಶಸ್ಸು ನಿಮ್ಮದಾಗಲಿದೆ. ಧೈರ್ಯದ ನಿರ್ಧಾರಗಳು ಲಾಭ ತರಲಿವೆ.

ಮೀನ: ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆ ಇದೆ. ಕುಟುಂಬದ ಮೇಲೆ ಅಕ್ಕರೆ ಹೆಚ್ಚಾಗಲಿದೆ. ಆಮಿಷಗಳಿಗೆ ಒಳಗಾಗದೆ ಸ್ವಂತ ಬುದ್ಧಿಯಿಂದ ಕೆಲಸ ಮಾಡಿ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು