ಪುತ್ತೂರಿನ ವಿವೇಕಾನಂದ ಕಾಲೇಜಿನ ಅಭಿರಾಮ್ ವಿ. ಭಟ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ!

ಪುತ್ತೂರು: ಇಂದು ಪ್ರಕಟವಾದ 2026ರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿರಾಮ್ ವಿ. ಭಟ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅತ್ಯಂತ ಕಠಿಣ ಸ್ಪರ್ಧೆಯ ನಡುವೆಯೂ ವಿಜ್ಞಾನ ವಿಭಾಗದಲ್ಲಿ ಒಟ್ಟು 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.

ಜ್ಞಾನ ವಿಭಾಗದ ಪ್ರಮುಖ ವಿಷಯಗಳಲ್ಲಿ ಪರಿಪೂರ್ಣ ಅಂಕಗಳನ್ನು ಗಳಿಸಿರುವ ಅಭಿರಾಮ್, ಕೇವಲ 2 ಅಂಕಗಳ ಅಂತರದಲ್ಲಿ 600ಕ್ಕೆ ಸಮೀಪಿಸಿ ರಾಜ್ಯದ ಅಗ್ರಸ್ಥಾನಿ ಎನಿಸಿಕೊಂಡಿದ್ದಾರೆ.ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಡಿಯಲ್ಲಿನ ಪಿಯು ಕಾಲೇಜು ಪ್ರತಿ ವರ್ಷವೂ ರ‍್ಯಾಂಕ್‌ಗಳನ್ನು ಬಾಚಿಕೊಳ್ಳುತ್ತಿದ್ದು, ಈ ಬಾರಿ ಅಭಿರಾಮ್ ಅವರ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಸಂಭ್ರಮದಲ್ಲಿದೆ.

ಇದನ್ನೂ ಓದಿ: ಬಂಟ್ವಾಳ: ಶ್ರೀರಾಮ ಪಿಯು ಕಾಲೇಜಿನ ಪ್ರಿತೇಶ್ ದ್ವಿತೀಯ ಪಿಯುಸಿಯಲ್ಲಿ ಜಿಲ್ಲಾ ಮಟ್ಟದ ಸಾಧನೆ!

ಅಭಿರಾಮ್ ಅವರ ಈ ಸಾಧನೆಯಿಂದ ಅವರ ಪೋಷಕರು ಮತ್ತು ಶಿಕ್ಷಕ ವೃಂದದವರು ಸಂಭ್ರಮದಲ್ಲಿದ್ದು, ಪುತ್ತೂರಿನಾದ್ಯಂತ ಹರ್ಷ ವ್ಯಕ್ತವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು