ಪಿಯುಸಿ ಫಲಿತಾಂಶದಲ್ಲಿ ಬಂತು ಅತೀ ದೊಡ್ಡ ಎಡವಟ್ಟು: 600ಕ್ಕೆ 683 ಅಂಕ ಪಡೆದ ವಿದ್ಯಾರ್ಥಿ!

ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶದ (2nd PUC Result 2026) ಸಂಭ್ರಮದ ನಡುವೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಅಧಿಕೃತ ವೆಬ್‌ಸೈಟ್‌ನಲ್ಲಿ ಅತೀ ದೊಡ್ಡ ಎಡವಟ್ಟೊಂದು ಸಂಭವಿಸಿದೆ. ಫಲಿತಾಂಶದ ಪಟ್ಟಿಯಲ್ಲಿ ವಿದ್ಯಾರ್ಥಿಯೊಬ್ಬರು ಒಟ್ಟು ಅಂಕಗಳಿಗಿಂತಲೂ ಹೆಚ್ಚಿನ ಅಂಕ ಪಡೆದಿರುವುದು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ.

ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸುವಾಗ, ಒಬ್ಬ ವಿದ್ಯಾರ್ಥಿಯ ಫಲಿತಾಂಶವು ಎಲ್ಲರ ಗಮನ ಸೆಳೆದಿದೆ. ಆ ವಿದ್ಯಾರ್ಥಿಯು 600 ಅಂಕಗಳ ಪರೀಕ್ಷೆಯಲ್ಲಿ 683 ಅಂಕಗಳನ್ನು ಪಡೆದಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ತೋರಿಸಲಾಗಿದೆ! ವಿದ್ಯಾರ್ಥಿಯು ಭಾಷಾ ವಿಷಯಗಳಲ್ಲಿ ಮತ್ತು ಐಚ್ಛಿಕ ವಿಷಯಗಳಲ್ಲಿ ನೂರಕ್ಕೆ ನೂರಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಪಡೆದಿರುವುದು ಮಾರ್ಕ್ಸ್‌ಕಾರ್ಡ್‌ನಲ್ಲಿ ದಾಖಲಾಗಿದೆ.

Advertisement

ಇದನ್ನೂ ಓದಿ: ಪಿಯುಸಿ ಫಲಿತಾಂಶ ಬೆನ್ನಲ್ಲೇ ಪರೀಕ್ಷೆ-2 ಡೇಟ್ ಫಿಕ್ಸ್

ಈ ವಿಲಕ್ಷಣ ಅಂಕಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಮಂಡಳಿಯ ವೆಬ್‌ಸೈಟ್‌ನ ನಿರ್ವಹಣೆ ಮತ್ತು ದೋಷಗಳ ಬಗ್ಗೆ ನೆಟ್ಟಿಗರು ಟೀಕೆಗಳ ಸುರಿಮಳೆಗರೆದಿದ್ದಾರೆ. ಮಂಡಳಿಯು ಇದನ್ನು ತಾಂತ್ರಿಕ ದೋಷ (Technical Error) ಎಂದು ಪರಿಗಣಿಸಿದ್ದು, ಕೂಡಲೇ ಸರಿಪಡಿಸುವ ಭರವಸೆ ನೀಡಿದೆ. ಇಂತಹ ದೋಷಗಳಿಂದ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಗೊಂದಲ ಉಂಟಾಗುತ್ತಿರುವುದು ವಿಷಾದನೀಯ.

Advertisement

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು