ಮಂಗಳೂರು ಭೀಕರ ರಸ್ತೆ ಅಪಘಾತ: ಚಿಕಿತ್ಸೆ ಫಲಿಸದೆ ನವ್ಯಾ ಸ್ಟುಡಿಯೋ ಮಾಲೀಕ ಮೋಹನ್ ಕುಮಾರ್ ನಿಧನ.

ಮಂಗಳೂರು: ಏಪ್ರಿಲ್ 11ರ ಶನಿವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ನಂತೂರು-ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. 29 ವರ್ಷದ ಗೋಪಾಲ್ ಚಲಾಯಿಸುತ್ತಿದ್ದ ಬೈಕ್, ಮೋಹನ್ ಕುಮಾರ್ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಗೋಪಾಲ್ ರಸ್ತೆಗೆ ಬಿದ್ದು ಟಿಪ್ಪರ್ ಲಾರಿಯ ಚಕ್ರದ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಸ್ಕೂಟರ್ ಸವಾರರಾಗಿದ್ದ ಮೋಹನ್ ಕುಮಾರ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು (ಏಪ್ರಿಲ್ 14) ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಮೃತ ಮೋಹನ್ ಕುಮಾರ್ ಅವರು ಪದವಿನಂಗಡಿಯಲ್ಲಿ ‘ನವ್ಯಾ ಸ್ಟುಡಿಯೋ’ ನಡೆಸುತ್ತಿದ್ದರು ಮತ್ತು ಕಪಿಟಾನಿಯೋ ನಿವಾಸಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು