ಟಿ20 ಸರಣಿ: 15ರ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಅವಕಾಶ? ಸಚಿನ್ ದಾಖಲೆ ಬ್ರೇಕ್‌ ಸಾಧ್ಯತೆ

vaibhav sooryavanshi india debut ireland tour

ನವದೆಹಲಿ: ಐಪಿಎಲ್ 2026ರಲ್ಲಿ ಸಿಡಿಲಿನಂತ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದ ಬಾಗಿಲು ತೆರೆದಿರುವ ಸಾಧ್ಯತೆ ಕಾಣಿಸಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ಐರ್ಲೆಂಡ್ ವಿರುದ್ಧ ಜೂನ್‌ನಲ್ಲಿ ನಡೆಯಲಿರುವ ಟಿ20 ಸರಣಿಗೆ ಈ 15 ವರ್ಷದ ಬಾಲಪ್ರತಿಭೆಯನ್ನು ಪರಿಗಣಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಐರ್ಲೆಂಡ್ ಪ್ರವಾಸದಲ್ಲಿ ಭಾರತ ಜೂನ್ 26 ಮತ್ತು 28ರಂದು ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಈ ಸರಣಿಗೆ ವೈಭವ್ ಹೆಸರು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಆಯ್ಕೆಯಾದರೆ, ವೈಭವ್ ಸೂರ್ಯವಂಶಿ ಭಾರತ ಪರ ಅಂತರರಾಷ್ಟ್ರೀಯ ಪಂದ್ಯ ಆಡಿದ ಅತಿ ಕಿರಿಯ ಆಟಗಾರನಾಗಿ ಸಚಿನ್ ತೆಂಡೂಲ್ಕರ್ (16 ವರ್ಷ) ದಾಖಲೆಯನ್ನು ಮುರಿಯಲಿದ್ದಾರೆ.

ಐಪಿಎಲ್ 2025ರಲ್ಲಿ ಗಮನಸೆಳೆದ ವೈಭವ್, ಮೊದಲ ಪಂದ್ಯದಲ್ಲೇ ಶಾರ್ದೂಲ್ ಠಾಕೂರ್ ವಿರುದ್ಧ ಮೊದಲ ಚೆಂಡಿನಲ್ಲೇ ಸಿಕ್ಸರ್ ಬಾರಿಸಿ ಗಮನಸೆಳೆದಿದ್ದರು. ನಂತರ ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಚೆಂಡುಗಳಲ್ಲಿ ಶತಕ ಸಿಡಿಸಿ ಕ್ರಿಕೆಟ್ ಲೋಕವನ್ನು ಬೆಚ್ಚಿಬೀಳಿಸಿದ್ದರು.

ಇದನ್ನೂ ಓದಿ: IPL: ಇಶಾನ್ ಕಿಶಾನ್ ಸ್ಫೋಟಕ ಬ್ಯಾಂಟಿಗ್; ಹಿಂಗೆ, ಸಕೀಬ್ ಬೌಲಿಂಗ್ ಕಮಾಲ್, ರಾಯಲ್ಸ್ ವಿರುದ್ಧ ಗೆದ್ದುಬೀಗಿದ SRH

ಅಂಡರ್-19 ಕ್ರಿಕೆಟ್‌ನಲ್ಲಿ ಕೂಡ ಸತತ ಉತ್ತಮ ಪ್ರದರ್ಶನ ನೀಡಿದ ಅವರು, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ಫೈನಲ್‌ನಲ್ಲಿ 175 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿ ಭಾರತಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇದು ಫೈನಲ್ ಪಂದ್ಯದಲ್ಲಿ ದಾಖಲಾದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.

ಐಪಿಎಲ್ 2026 ಆರಂಭದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 17 ಚೆಂಡುಗಳಲ್ಲಿ 52 ರನ್ ಸಿಡಿಸಿದ ವೈಭವ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಜಸ್ಪ್ರೀತ್ ಬೂಮ್ರಾ, ಜೋಶ್ ಹೇಝಲ್ವುಡ್, ಭುವನೇಶ್ವರ್ ಕುಮಾರ್ ಮುಂತಾದ ಟಾಪ್ ಬೌಲರ್‌ಗಳ ವಿರುದ್ಧ ನಿರ್ಭೀತಿಯಿಂದ ಆಟ ಆಡಿರುವುದು ಆಯ್ಕೆದಾರರನ್ನು ಮೆಚ್ಚಿಸಿದೆ.

ಹಳೆ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಸೇರಿದಂತೆ ಹಲವರು ವೈಭವ್‌ಗೆ ತಕ್ಷಣ ಟೀಂ ಇಂಡಿಯಾದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆರಂಭದಲ್ಲೇ ಬೌಲರ್‌ಗಳನ್ನು ದಂಡಿಸಲು ಪ್ರಾರಂಭಿಸುವ ಸೂರ್ಯವಂಶಿಯ ಆಟ ನೋಡಿ ಬೆರಗಾದ ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ಕೂಡ ಸೂರ್ಯವಂಶಿಗೆ ಬೌಲಿಂಗ್‌ ಮಾಡುವ ಬೌಲರ್‌ಗಳ ಪರಿಸ್ಥಿತಿಯ ಬಗ್ಗೆ ಭೀತಿ ವ್ಯಕ್ತಪಡಿಸಿದ್ದರು. ಐರ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಜಿಂಬಾಬ್ವೆ ವಿರುದ್ಧದ ಸರಣಿಗೂ ಆಯ್ಕೆಯಾಗುವ ಸಾಧ್ಯತೆ ಇದೆ.

ಒಟ್ಟಾರೆ, ಕೇವಲ 15ರ ವಯಸ್ಸಿನಲ್ಲಿ ವಿಶ್ವದ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ, ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು