Breaking News

ಹೆಂಡತಿ, ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ಕೊಲೆ; ಆರೋಪಿಯೂ ಆತ್ಮಹತ್ಯೆ

Man shoots wife, two children to death in Punjab

ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಬೆಳಗ್ಗೆ ಮನೆಕೆಲಸದವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಗುರುವಾರ ಬೆಳಗ್ಗೆ ಮನೆಕೆಲಸದಾಕೆ ಬಂದಾಗ ಮನೆಯ ಗೇಟ್ ಒಳಭಾಗದಿಂದ ಲಾಕ್ ಆಗಿತ್ತು. ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದಿದ್ದಾಗ, ಬಾಡಿಗೆ ಮನೆಯವರು ಹಾಗೂ ನೆರೆಮನೆಯವರು ಸೇರಿ ಬಾಗಿಲು ಒಡೆದಿದ್ದಾರೆ. ಆಗ ಮನೆಯೊಳಗೆ ನಾಲ್ವರ ದೇಹಗಳು ಬಿದ್ದಿರುವುದು ಕಂಡುಬಂದಿದೆ.

Advertisement

ಇದನ್ನೂ ಓದಿ: ಸ್ನೇಹಿತನ ಕೊಲೆಗೈದು ಮೃತದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ತುಂಬಿಸಿದ ವ್ಯಕ್ತಿ!

42 ವರ್ಷದ ಅಮನ್‌ದೀಪ್ ಸಿಂಗ್ ತನ್ನ ಪತ್ನಿ 40 ವರ್ಷದ ಜಸ್ವೀರ್ ಕೌರ್ ಮತ್ತು ಇಬ್ಬರು ಹೆಣ್ಣು ಮಕ್ಕಳಾದ 10 ವರ್ಷದ ಮನ್ವೀರ್ ಕೌರ್ ಹಾಗೂ 6 ವರ್ಷದ ಪರ್ಮೀತ್ ಕೌರ್ ಅವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗುರುತಿಸಲಾಗಿದೆ. ಅಮನ್‌ದೀಪ್ ಸಿಂಗ್ ಬಿಲ್ಡರ್, ಹಣಕಾಸು ವ್ಯವಹಾರ ಹಾಗೂ ಸಲೂನ್ ನಡೆಸುತ್ತಿದ್ದನು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದು, ಘಟನಾ ಸ್ಥಳದಲ್ಲಿದ್ದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ನಿಯೋಜಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ನೆರೆಹೊರೆಯವರು, ಬಾಡಿಗೆದಾರರು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಭೂಪಿಂದರ್ ಸಿಂಗ್ ಸಿಧು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು