Punjab : ಸ್ನೇಹಿತನ ಕೊಲೆಗೈದು ಮೃತದೇಹವನ್ನು ತುಂಡರಿಸಿ ಡ್ರಮ್ ನಲ್ಲಿ ತುಂಬಿಸಿದ ವ್ಯಕ್ತಿ!

ಪಂಜಾಬ್ : ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಇದೇ ತೆರನಾದ ಕೃತ್ಯವೊಂದು ನಡೆದಿತ್ತುಮ ವೃದ್ಧೆಯನ್ನು ಕೊಂದು ಡ್ರಮ್ ನಲ್ಲಿ ಹಾಕಿಡಲಾಗಿತ್ತು. ಮೈ ಬೆವರಿಳಿಸುವ ಇಂತಾ ಕೃತ್ಯ ಹಾಗೂ ವಿಕೃತ ಮನೋಭಾವದ ಇಂತಾ ಮನಸ್ಸುಗಳು ನಮ್ಮಲ್ಲಿ ಇನ್ನೂ ಇದ್ದಾರೆಯೇ ಎಂಬುವುದೇ ವಿಷಾದನೀಯ. ಇದೀಗ, ಪಂಜಾಬ್‌ನ ಲುಧಿಯಾನದಲ್ಲಿ ಸ್ನೇಹಿತನನ್ನೇ ಕೊಲೆಗೈದು, ಶವವನ್ನು ಮೂರು ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿರುವ ಘಟನೆ ನಡೆದಿದೆ. ಲುಧಿಯಾನದ ಖಾಸಗಿ ಶಾಲೆಯ ಸಮೀಪದ ಖಾಲಿ ಜಾಗದಲ್ಲಿ 30 ವರ್ಷದ ವ್ಯಕ್ತಿಯ ವಿರೂಪಗೊಂಡ ಅವಶೇಷಗಳು ಗುರುವಾರ ಪತ್ತೆಯಾಗಿವೆ. ಅಧಿಕಾರಿಗಳು, ಮೃತಪಟ್ಟ ವ್ಯಕ್ತಿಯನ್ನು ದವೀಂದರ್ ಎಂದು ಗುರುತಿಸಿದ್ದಾರೆ. ಈ ಬೆಚ್ಚಿ ಬೀಳಿಸುವ ಕೃತ್ಯ ದೇಶದಲ್ಲಿ ಮತ್ತೊಂದು ಭಯಾನಕ ಘಟನೆಯಾಗಿದೆ.

ಇದನ್ನೂ ಓದಿ : ಬಾಂದ್ರಾ ಚುನಾವಣಾ ಪ್ರಚಾರದ ವೇಳೆ ಶಿವಸೇನಾ ನಾಯಕನಿಗೆ ಇರಿತ! ಕಲ್ಲು ತೂರಾಟ

ಆರಂಭಿಕ ತನಿಖೆಯಲ್ಲಿ, ಹತ್ತಿರದ ಬೀದಿಯಲ್ಲಿ ವಾಸಿಸುವ ಪರಿಚಯಸ್ಥ ಶೆರಾ ಎಂಬಾತನನ್ನು ದವೀಂದರ್ ಕೊಲೆ ಮಾಡಿ, ಈತ ಪ್ರಕರಣದ ಮುಖ್ಯ ಶಂಕಿತನೆಂದು ಪೊಲೀಸರು ಗುರುತಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ದವೀಂದರ್ ಎಂಬಾತ ಶವವನ್ನು ಹೊಂದಿರುವ ಡ್ರಮ್ ಅನ್ನು ಖಾಲಿ ನಿವೇಶನವೊಂದರತ್ತ ಸಾಗಿಸುತ್ತಿರುವುದು ಕಂಡುಬಂದಿದೆ. ಇದು ಶೆರಾ ಎಂಬ ವ್ಯಕ್ತಿಯ ಮೃತದೇಹ ಅಂತ ದೃಢವಾಗಿದ್ದು, ಪೊಲೀಸರು, ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಮೃತದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ, ಒಂದು ಭಾಗವನ್ನು ಸುಟ್ಟುಹಾಕಲು ಯತ್ನಿಸಲಾಗಿದೆ. ಉಳಿದ ಭಾಗಗಳನ್ನು ಬಿಳಿ ಪ್ಲಾಸ್ಟಿಕ್ ಬ್ಯಾರೆಲ್‌ನಲ್ಲಿ ಬಿಸಾಡಲಾಗಿದೆ. ದೇವಿಂದರ್ ಎರಡು ದಿನಗಳ ಹಿಂದೆ ಮುಂಬೈನಿಂದ ಲುಧಿಯಾನಕ್ಕೆ ಬಂದಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಲುಧಿಯಾನದಲ್ಲಿ ಭಾರೀ ಆಘಾತ ಮೂಡಿಸಿದೆ.

ಇದನ್ನೂ ಓದಿ :ರಫೀಕ್‌ನಿಂದ ಹತ್ಯೆಗೀಡಾದ ರಂಜಿತಾಳ ಕುಟುಂಬದ ನೆರವಿಗೆ ನಿಂತ ಬಿಜೆಪಿ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು