ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ವತಿಯಿಂದ ಶ್ರೀ ಶಂಕರ ಜಯಂತ್ಯುತ್ಸವದ ಅಂಗವಾಗಿ ಪುತ್ತೂರಿನಲ್ಲಿ ಬೃಹತ್ ಮೊತ್ತದ ಬಹುಮಾನಗಳನ್ನು ಒಳಗೊಂಡ ‘ಶಂಕರ ವಿಜಯ’ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೇ 3ರ ಭಾನುವಾರದಂದು ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ.
ಯಾವೆಲ್ಲಾ ಸ್ಪರ್ಧೆಗಳಿವೆ? (ವಿಭಾಗವಾರು ವಿವರ):

ವಿದ್ಯಾರ್ಥಿ ವಿಭಾಗ (10 ರಿಂದ 14 ವರ್ಷ): ಗಣೇಶ ಪಂಚರತ್ನ ಮತ್ತು ಗುರುಪಾದುಕಾ ಸ್ತೋತ್ರದ ಕಂಠಪಾಠ ಸ್ಪರ್ಧೆ.
ವಿದ್ಯಾರ್ಥಿ ವಿಭಾಗ (15 ರಿಂದ 18 ವರ್ಷ): ‘ಶ್ರೀ ಶಂಕರಾಚಾರ್ಯರಲ್ಲಿದ್ದ ಹಿರಿಯರನ್ನು ಗೌರವಿಸುವ ಮತ್ತು ಶಿಷ್ಯ ವಾತ್ಸಲ್ಯದ ಗುಣ’ – ಭಾಷಣ ಸ್ಪರ್ಧೆ.

ವಿದ್ಯಾರ್ಥಿ ವಿಭಾಗ (18 ವರ್ಷ ಮೇಲ್ಪಟ್ಟವರು): ‘ಶ್ರೀ ಶಂಕರ ಭಗವತ್ಪಾದರ ಜೀವನದಲ್ಲಿ ನಾ ಕಂಡ ಮೌಲ್ಯಗಳು’ – ಭಾಷಣ ಸ್ಪರ್ಧೆ.
ಸಾರ್ವಜನಿಕ ವಿಭಾಗ (ವಯಸ್ಸಿನ ನಿರ್ಬಂಧವಿಲ್ಲ): ಶ್ರೀಮದ್ ವಾಲ್ಮೀಕಿ ರಾಮಾಯಣ ಹಾಗೂ ಶ್ರೀ ಶಂಕರರ ಜೀವನ-ಉಪದೇಶ ಕುರಿತಾದ ‘ರಸಪ್ರಶ್ನೆ’ ಸ್ಪರ್ಧೆ.
ಆಕರ್ಷಕ ಬಹುಮಾನ
ವಿಜೇತರಿಗೆ ಒಟ್ಟು 2.5 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ಮೊತ್ತದ ಬಹುಮಾನಗಳನ್ನು ನೀಡಲಾಗುತ್ತಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವರಿಗೆ ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಬೆಲೆಬಾಳುವ ವಸ್ತು ವಿಶೇಷಗಳನ್ನು ಬಹುಮಾನವಾಗಿ ನೀಡಲಾಗುವುದು. ಅಲ್ಲದೆ, ಆಯ್ದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳೂ ಇವೆ.
ಜಗದ್ಗುರುಗಳ ಸನ್ನಿಧಾನದಲ್ಲಿ ಪ್ರಶಸ್ತಿ ವಿತರಣೆ:
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಮೇ 7ರಂದು ಸ್ವತಃ ಬಹುಮಾನ ವಿತರಿಸಿ ಆಶೀರ್ವದಿಸಲಿದ್ದಾರೆ.
ನೋಂದಣಿ ಮತ್ತು ಹೆಚ್ಚಿನ ಮಾಹಿತಿ:
ಅರ್ಹತೆ: ಪುತ್ತೂರು, ಸುಳ್ಯ, ಮಂಜೇಶ್ವರ, ಕಡಬ ಮತ್ತು ಕಾಸರಗೋಡು, ಬಂಟ್ವಾಳ ತಾಲೂಕಿನ ನಿವಾಸಿಗಳು ಅಥವಾ ಅಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ನೋಂದಣಿಗೆ ಕೊನೆಯ ದಿನಾಂಕ: ಮೇ 1, 2026.
ಸಂಪರ್ಕ ಸಂಖ್ಯೆಗಳು: 9483435696, 9483934170, 9449102082.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

