ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ನೌಕೆಗಳ ಮೇಲೆ ಇರಾನ್ ಗುಂಡಿನ ದಾಳಿ: ಯು-ಟರ್ನ್ ಹೊಡೆದು ವಾಪಸ್ ಬಂದ ಟ್ಯಾಂಕರ್‌ಗಳು!

ಟೆಹ್ರಾನ್: ಹೋರ್ಮುಜ್ ಜಲಸಂಧಿಯ (Strait of Hormuz) ಮೇಲೆ ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇಂದು ಸಂಜೆ ಈ ಮಾರ್ಗವನ್ನು ದಾಟಲು ಪ್ರಯತ್ನಿಸುತ್ತಿದ್ದ ಭಾರತದ ಎರಡು ತೈಲ ನೌಕೆಗಳ ಮೇಲೆ ಇರಾನ್ ನೌಕಾಪಡೆ ಗುಂಡಿನ ದಾಳಿ ನಡೆಸಿದ್ದು, ಅಂತಿಮವಾಗಿ ಭಾರತೀಯ ಹಡಗುಗಳು ಯು-ಟರ್ನ್ ಹೊಡೆದು ವಾಪಸ್ ತೆರಳಿವೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ (IRGC) ಎರಡು ಗನ್‌ಬೋಟ್‌ಗಳು ಭಾರತೀಯ ಟ್ಯಾಂಕರ್‌ಗಳನ್ನು ಗುರಿಯಾಗಿಸಿ ಗುಂಡು ಹಾರಿಸಿವೆ. ಈ ವಿಷಯವನ್ನು ಬ್ರಿಟಿಷ್ ಮಿಲಿಟರಿ ಅಧಿಕೃತವಾಗಿ ದೃಢಪಡಿಸಿದೆ.

ಅದೃಷ್ಟವಶಾತ್, ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಟ್ಯಾಂಕರ್‌ನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕ ಕದನವಿರಾಮ ಉಲ್ಲಂಘಿಸಿದೆ ಎಂಬ ಆರೋಪ ಹೊರಿಸಿರುವ ಇರಾನ್, ಇಂದು ಈ ಪ್ರಮುಖ ಜಲಮಾರ್ಗವನ್ನು ಬಂದ್ ಮಾಡುವುದಾಗಿ ಘೋಷಿಸಿತ್ತು. ನಿಷೇಧದ ನಡುವೆಯೂ ಸಾಗಲು ಯತ್ನಿಸಿದಾಗ ಈ ದಾಳಿ ನಡೆದಿದೆ.

Advertisement

ಇದನ್ನೂ ಓದಿ: ಸಿಂಗಾಪುರದಲ್ಲಿ ಟೆಂಡರ್ ದಂಧೆ: ಭಾರತೀಯ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಈ ಘಟನೆಯ ಬೆನ್ನಲ್ಲೇ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯವು ಇರಾನ್ ರಾಯಭಾರಿಗೆ ಸಮನ್ಸ್ ನೀಡಿದ್ದು, ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ಭಾರತೀಯ ನೌಕೆಗಳ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸಿದೆ.

Advertisement

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು