ಸೋಲಿನ ನಡುವೆಯೂ ಮಿಂಚಿದ ಆರ್ಚರ್; ಐಪಿಎಲ್‌ ಇತಿಹಾಸದಲ್ಲಿ ಇತಿಹಾಸ ಸೃಷ್ಟಿ

Jofra Archer Records in IPL

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸೋತಿದ್ದರೂ, ತಂಡದ ವೇಗಿ ಜೋಫ್ರಾ ಆರ್ಚರ್ ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದರು. ತಮ್ಮ ಭರ್ಜರಿ ಬೌಲಿಂಗ್ ಪ್ರದರ್ಶನದ ಮೂಲಕ ಆರ್ಚರ್ ಹೊಸ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಕೆಕೆಆರ್ ಆರಂಭಿಕ ಬ್ಯಾಟ್ಸ್‌ಮನ್ ಟಿಮ್ ಸೈಫರ್ಟ್ ಅವರನ್ನು ಪಂದ್ಯದಲ್ಲೇ ಮೊದಲ ಎಸೆತದಲ್ಲಿ ಔಟ್ ಮಾಡುವ ಮೂಲಕ ಆರ್ಚರ್ ವಿಶಿಷ್ಟ ಸಾಧನೆ ಮಾಡಿದರು. ಇದಕ್ಕೂ ಮುನ್ನದ ಎರಡು ಪಂದ್ಯಗಳಲ್ಲಿಯೂ ಅವರು ಇದೇ ಸಾಧನೆ ಮಾಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫಿಲ್ ಸಾಲ್ಟ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಭಿಷೇಕ್ ಶರ್ಮಾ ಅವರನ್ನು ಮೊದಲ ಎಸೆತದಲ್ಲೇ ಪೆವಿಲಿಯನ್‌ಗೆ ಕಳುಹಿಸಿದ್ದರು.

ಇದನ್ನೂ ಓದಿ: IPL: ವರುಣ್-ತ್ಯಾಗಿ ಮ್ಯಾಜಿಕ್, ರಿಂಕು ಫಿನಿಷಿಂಗ್ ಟಚ್: ಕೆಕೆಆರ್ ಗೆಲುವಿನ ಸಂಭ್ರಮ

ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸತತ ಮೂರು ಪಂದ್ಯಗಳಲ್ಲಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಆರ್ಚರ್ ಪಾತ್ರರಾದರು. ಈ ಸಾಧನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದೊಂದೇ ಅಲ್ಲ, ಆರ್ಚರ್ ಮತ್ತೊಂದು ಪ್ರಮುಖ ದಾಖಲೆಯನ್ನೂ ಸರಿಗಟ್ಟಿದರು. ಮೊಹಮ್ಮದ್ ಶಮಿ ಅವರ ಹೆಸರಿನಲ್ಲಿದ್ದ, ಐಪಿಎಲ್‌ನಲ್ಲಿ ಐದು ಬಾರಿ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ದಾಖಲೆ ಈಗ ಆರ್ಚರ್ ಹೆಸರಿಗೂ ಸೇರಿದೆ. ಸೈಫರ್ಟ್ ಅವರನ್ನು ಔಟ್ ಮಾಡುವ ಮೂಲಕ ಅವರು ಈ ಮೈಲಿಗಲ್ಲು ತಲುಪಿದರು.

ಪಂದ್ಯದಲ್ಲಿ ರಾಜಸ್ಥಾನ ಸೋತಿದ್ದರೂ, ಆರ್ಚರ್ ಅವರ ಸಾಧನೆ ಐಪಿಎಲ್ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು