ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಹೆಚ್ಚುತ್ತಿರುವ ವೆಚ್ಚದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಕಿಂಡರ್ಗಾರ್ಟನ್ ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ₹2.25 ಲಕ್ಷ ಎಂದು ತಿಳಿಸಿದ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೋಷಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಾಕ್ಷಿ ಎಂಬ ಸಾಫ್ಟ್ವೇರ್ ಡೆವಲಪರ್ ತನ್ನ ಎಕ್ಸ್ ಖಾತೆಯಲ್ಲಿ ಶಾಲಾ ಶುಲ್ಕದ ವಿವರ ಹಂಚಿಕೊಂಡು, ʼಟ್ವಿಂಕಲ್ ಟ್ವಿಂಕಲ್ʼ ಕಲಿಯಲು ₹2.5 ಲಕ್ಷ ಫೀ!” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿ, ಶಿಕ್ಷಣ ಕ್ಷೇತ್ರದ ವ್ಯಾಪಾರೀಕರಣದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕಿಡ್ನಿ ಮಾರಲು ಮುಂದಾಗಿದ್ದ ತಂದೆ; ವಿದ್ಯಾರ್ಥಿನಿಯ ನೆರವಿಗೆ ಧಾವಿಸಿದ ಸುರೇಶ್ ಕುಮಾರ್: ಸಿಎಂ ನಿಧಿಯಿಂದ ಚಿಕಿತ್ಸೆ ಭರವಸೆ!
ಹಂಚಿಕೊಂಡ ವಿವರಗಳ ಪ್ರಕಾರ, 2026-27 ಶೈಕ್ಷಣಿಕ ವರ್ಷಕ್ಕೆ ಶಾಲೆಯು ₹15,000 ಪ್ರವೇಶ ಶುಲ್ಕ, ₹33,000 ನಾನ್-ರಿಫಂಡೇಬಲ್ ಕಾಷನ್ ಹಣ ಮತ್ತು ₹2.25 ಲಕ್ಷ ಟ್ಯೂಷನ್, ಲೈಬ್ರರಿ ಹಾಗೂ ಜಿಮ್ಖಾನಾ ಶುಲ್ಕಗಳನ್ನು ವಿಧಿಸಿದೆ. ಇದಲ್ಲದೆ ಶೂ, ಸಾಕ್ಸ್ ಮತ್ತು ಕ್ಯಾಫೆಟೀರಿಯಾ ವೆಚ್ಚಗಳು ಸೇರಿಲ್ಲ ಎಂಬುದೂ ಗಮನ ಸೆಳೆದಿದೆ.

2.5 lakh fees for learning Twinkle Twinkle 😂🤣 pic.twitter.com/yEucagf88C
— Sakshi (@Sakshi50038) April 19, 2026
ಈ ಪೋಸ್ಟ್ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, “ಶಿಕ್ಷಣ ವೆಚ್ಚ ನಿಯಂತ್ರಣಕ್ಕೆ ಸರ್ಕಾರ ಏನು ಮಾಡುತ್ತಿದೆ?” ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರು ಪ್ರೀಮಿಯಂ ಶಾಲೆಗಳ ಸೌಲಭ್ಯಗಳನ್ನು ಉಲ್ಲೇಖಿಸಿ ಈ ಶುಲ್ಕವನ್ನು ಸಮರ್ಥಿಸಿದರೆ, ಇನ್ನೂ ಹಲವರು ಮಧ್ಯಮ ವರ್ಗದ ಕುಟುಂಬಗಳಿಗೆ ಶಿಕ್ಷಣ ದೂರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಕಿಂಡರ್ಗಾರ್ಟನ್ ಮಟ್ಟದಲ್ಲೇ ಇಷ್ಟೊಂದು ಹೆಚ್ಚಿನ ಶುಲ್ಕ ವಿಧಿಸುವುದು ಶಿಕ್ಷಣದಲ್ಲಿ ಅಸಮಾನತೆ ಹೆಚ್ಚಿಸುತ್ತಿದೆ ಎಂಬ ಚರ್ಚೆ ಮತ್ತೆ ಜೋರಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

