ಏಕಾನಾ ಕ್ರಿಕೆಟ್ ಕ್ರೀಡಾಂಗಣದ ಬಿ ಮೈದಾನದಲ್ಲಿ ನಡೆದ ಐಪಿಎಲ್ 32ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 40 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಗಳಿಸಿತು. ತಂಡದ ಪರ ರವೀಂದ್ರ ಜಡೇಜಾ 43 ರನ್‌ಗಳನ್ನು (ಅಜೇಯ) ಗಳಿಸಿ ತಂಡವನ್ನು ಮುನ್ನಡೆಸಿದರು.

ಯಶಸ್ವಿ ಜೈಸ್ವಾಲ್ 22, ರಿಯಾನ್ ಪರಾಗ್ 20, ಶಿಮ್ರಾನ್ ಹೆಟ್ಮೆಯರ್ 22, ಡೊನೊನ್ ಫೆರೀರಾ 20 ಹಾಗೂ ಶುಭಂ ದುಬೆ 19 ರನ್‌ಗಳನ್ನು (ಅಜೇಯ) ಸೇರಿಸಿದರು. ವೈಭವ್ ಸೂರ್ಯವಂಶಿ 8 ರನ್ ಗಳಿಸಿದರು. ಧ್ರುವ್ ಜುರೆಲ್ ಶೂನ್ಯಕ್ಕೆ ಔಟ್ ಆದರು.
ಇದನ್ನೂ ಓದಿ: IPL: ಅಭಿಷೇಕ್ ಶರ್ಮಾ ಸ್ಫೋಟಕ ಶತಕ, ಮಲಿಂಗ ಮಾರಕ ಬೌಲಿಂಗ್: ಡೆಲ್ಲಿ ವಿರುದ್ಧ ಗೆದ್ದ ಸನ್ರೈಸರ್ಸ್ ಹೈದರಾಬಾದ್

ಲಕ್ನೋ ಪರ ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್ ಹಾಗೂ ಪ್ರಿನ್ಸ್ ಯಾದವ್ ತಲಾ 2 ವಿಕೆಟ್‌ಗಳನ್ನು ಪಡೆದು ಗಮನಸೆಳೆದರು.
160 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನದ ಬೌಲಿಂಗ್ ದಾಳಿಗೆ ತತ್ತರಿಸಿ 18 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 119 ರನ್‌ಗಳಿಗೆ ಆಲೌಟ್ ಆಯಿತು.
ಲಕ್ನೋ ಪರ ಮಿಚೆಲ್ ಮಾರ್ಷ್ 55 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರೆ, ನಿಕೋಲಸ್ ಪೂರನ್ 22, ಹಿಮ್ಮತ್ ಸಿಂಗ್ 15, ಮುಕುಲ್ ಚೌಧರಿ 7, ಮೊಹಮ್ಮದ್ ಶಮಿ 6 ಹಾಗೂ ಮಾಯಾಂಕ್ ಯಾದವ್ 5 ರನ್‌ಗಳನ್ನು ಗಳಿಸಿದರು. ದಿಗ್ವೇಶ್ ರಥಿ 2 ರನ್ ಗಳಿಸಿದರು. ಮೊಹ್ಸಿನ್ ಖಾನ್, ಐಯ್ಡೆನ್ ಮಾರ್ಕ್ರಾಮ್, ಆಯುಷ್ ಬದೋನಿ ಹಾಗೂ ರಿಷಬ್ ಪಂತ್ ಶೂನ್ಯಕ್ಕೆ ಔಟ್ ಆದರು.
ರಾಜಸ್ಥಾನ ಪರ ಜೋಫ್ರಾ ಆರ್ಚರ್ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಾಂದ್ರೆ ಬರ್ಗರ್ ಹಾಗೂ ಬ್ರಿಜೇಶ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ರವಿ ಬಿಷ್ಣೊಯಿ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಲಕ್ನೋ ವಿರುದ್ಧ 40 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

