IPL: ಅಭಿಷೇಕ್ ಶರ್ಮಾ ಸ್ಫೋಟಕ ಶತಕ, ಮಲಿಂಗ ಮಾರಕ ಬೌಲಿಂಗ್: ಡೆಲ್ಲಿ ವಿರುದ್ಧ ಗೆದ್ದ ಸನ್ರೈಸರ್ಸ್ ಹೈದರಾಬಾದ್

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 31ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 48 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 242 ರನ್‌ಗಳ ಭಾರೀ ಮೊತ್ತ ದಾಖಲಿಸಿತು. ತಂಡದ ಪರ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 68 ಎಸೆತಗಳಲ್ಲಿ 10 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ಅಜೇಯ 135 ರನ್‌ಗಳನ್ನು ಸಿಡಿಸಿದರು.

ಇನ್ನು ಟ್ರಾವಿಸ್ ಹೆಡ್ 37 ರನ್, ಇಶಾನ್ ಕಿಶನ್ 25 ರನ್ (ರನ್ ಔಟ್), ಹೆನ್ರಿಚ್ ಕ್ಲಾಸೆನ್ ಅಜೇಯ 37 ರನ್ ಗಳಿಸಿದರು. ಡೆಲ್ಲಿ ಪರ ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.

ಇದನ್ನೂ ಓದಿ: IPL: ಪ್ರಿಯಾಂಶ್-ಕನೋಲಿ ಆರ್ಭಟಕ್ಕೆ ಆರ್‌ಸಿಬಿ ದಾಖಲೆಗಳು ಪುಡಿಪುಡಿ

243 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 195 ರನ್‌ಗಳಿಗೆ ಸೀಮಿತವಾಯಿತು. ಡೆಲ್ಲಿ ಪರ ನಿತೀಶ್ ರಾಣಾ 57 ರನ್, ಸಮೀರ್ ರಿಜ್ವಿ 41 ರನ್, ಕೆಎಲ್ ರಾಹುಲ್ 37 ರನ್, ಟ್ರಿಸ್ಟಾನ್ ಸ್ಟಬ್ಸ್ 27 ರನ್ ಗಳಿಸಿದರು.

ಪಾತುಮ್ ನಿಸ್ಸಂಕ 8 ರನ್, ಆಶುತೋಶ್ ಶರ್ಮಾ 14 ರನ್, ಅಕ್ಷರ್ ಪಟೇಲ್ 2 ರನ್ ಗಳಿಸಿದರು. ಕುಲದೀಪ್ ಯಾದವ್ ಕ್ರೀಸ್‌ನಲ್ಲಿ ಉಳಿದಿದ್ದರು. ಲುಂಗಿ ಎನ್‌ಗಿಡಿ ಹಾಗೂ ಡೇವಿಡ್ ಮಿಲ್ಲರ್ ಶೂನ್ಯಕ್ಕೆ ಔಟ್ ಆದರು.

ಸನ್‌ರೈಸರ್ಸ್ ಪರ ಈಶಾನ್ ಮಲಿಂಗ 4 ವಿಕೆಟ್ ಪಡೆದು ಮಿಂಚಿದರು. ಹರ್ಷ್ ದುಬೆ 2 ವಿಕೆಟ್ ಪಡೆದು ಸಹಾಯ ಮಾಡಿದರು. ಜೊತೆಗೆ ಸಕಿಬ್ ಹುಸೈನ್, ದಿಲ್ಶಾನ್ ಮದುಶಂಕ ತಲಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು