ದೆಹಲಿ: ದೆಹಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರ ಹೊಂದಿರುವ ಆಮ್ ಆದ್ಮಿ ಪಾರ್ಟಿಗೆ (AAP) ಈಗ ಅಸ್ತಿತ್ವದ ಭೀತಿ ಎದುರಾಗಿದೆ. ಎಎಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಶೀಘ್ರದಲ್ಲೇ ಭಾರತೀಯ ಜನತಾ ಪಾರ್ಟಿ (BJP) ಸೇರಲಿದ್ದಾರೆ. ಇದೀಗ ದೆಹಲಿಯ ರಾಜಕೀಯ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಕೇವಲ ರಾಘವ್ ಚಡ್ಡಾ ಮಾತ್ರವಲ್ಲದೆ, ಎಎಪಿಯ ರಾಜ್ಯಸಭಾ ಸಂಸದರ ಪೈಕಿ ಮೂರನೇ ಎರಡರಷ್ಟು (2/3) ಸದಸ್ಯರು ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಒಂದು ವೇಳೆ 2/3 ಭಾಗದ ಸಂಸದರು ಒಟ್ಟಾಗಿ ಪಕ್ಷಾಂತರ ಮಾಡಿದರೆ ಅಥವಾ ವಿಲೀನಗೊಂಡರೆ, ಅವರ ಮೇಲೆ ‘ಪಕ್ಷಾಂತರ ನಿಷೇಧ ಕಾಯ್ದೆ’ ಅಡಿ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದು ಎಎಪಿಗೆ ದೊಡ್ಡ ಹೊಡೆತ ನೀಡುವ ತಂತ್ರವಾಗಿದೆ.

ಇದನ್ನೂ ಓದಿ: ಪುತ್ತೂರು: ಲವ್ ಮಾಡಿ ಮಗು ಕರುಣಿಸಿದ ಪ್ರಕರಣ: ಸಂತ್ರಸ್ತೆಯನ್ನು ವಿವಾಹವಾಗಲು ಕೃಷ್ಣನಿಗೆ ಹೈಕೋರ್ಟ್ ಸೂಚನೆ
ಅರವಿಂದ್ ಕೇಜ್ರಿವಾಲ್ ಅವರು ಕಾನೂನು ಹೋರಾಟಗಳಲ್ಲಿ ಸಿಲುಕಿರುವ ಬೆನ್ನಲ್ಲೇ, ಪಕ್ಷದ ಪ್ರಭಾವಿ ಯುವ ನಾಯಕರು ಸಾಲು ಸಾಲಾಗಿ ಪಕ್ಷ ತೊರೆಯುತ್ತಿರುವುದು ಎಎಪಿಯನ್ನು ದುರ್ಬಲಗೊಳಿಸಿದೆ. ರಾಜ್ಯಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಮತ್ತು ದೆಹಲಿ ರಾಜಕೀಯದಲ್ಲಿ ಎಎಪಿಯನ್ನು ಪೂರ್ಣವಾಗಿ ಹತ್ತಿಕ್ಕಲು ಬಿಜೆಪಿ ಈ ‘ಆಪರೇಷನ್’ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಕುರಿತು ರಾಘವ್ ಚಡ್ಡಾ ಅಥವಾ ಎಎಪಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

