ನಟ ಅಕ್ಷಯ್‌ ಕುಮಾರ್‌ ಮಗಳ ಅಶ್ಲೀಲ ಫೋಟೋ ಕೇಳಿದ ಆರೋಪಿ ಅರೆಸ್ಟ್

akshay-kumar-daughter-cyber-harassment-arrest-news

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪುತ್ರಿ ನಿತಾರಾ ಕುಮಾರ್ (13) ಅವರಿಗೆ ಆನ್‌ಲೈನ್ ಗೇಮ್ ಆಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬನು ಅಶ್ಲೀಲ ಫೋಟೋ ಕಳುಹಿಸುವಂತೆ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಇಲಾಖೆ ಆರೋಪಿಯನ್ನು ಬಂಧಿಸಿದೆ.

ಈ ಕುರಿತು ಮಹಾರಾಷ್ಟ್ರ ಸೈಬರ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆ 2025ರ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದು, ಈ ಬಗ್ಗೆ ಅಕ್ಷಯ್ ಕುಮಾರ್ ಸ್ವತಃ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಅವರ ಹೇಳಿಕೆಯ ಪ್ರಕಾರ, ನಿತಾರಾ ಆನ್‌ಲೈನ್ ಗೇಮ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬನು ಆರಂಭದಲ್ಲಿ ಸಾಮಾನ್ಯವಾಗಿ ಮಾತನಾಡುತ್ತಿದ್ದ. ನಂತರ ‘ನೀವು ಎಲ್ಲಿಂದ?’ ಎಂದು ಕೇಳಿ, ಆಕೆಯು ‘ಮುಂಬೈ’ ಎಂದು ಉತ್ತರಿಸಿದಳು.‌

Advertisement

ಇದನ್ನೂ ಓದಿ: ಓಟಿಟಿಗೆ ಬರ್ತಿದೆ ‘ದಿ ಕೇರಳ ಸ್ಟೋರಿ-2’: ರಿಲೀಸ್ ಡೇಟ್ ಫಿಕ್ಸ್; ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

ಮುಂದೆ ಆ ವ್ಯಕ್ತಿ ‘ನೀವು ಪುರುಷನಾ ಅಥವಾ ಮಹಿಳೆ?’ ಎಂದು ಕೇಳಿದ ಬಳಿಕ, ‘ನ್ಯೂಡ್ ಫೋಟೋ ಕಳುಹಿಸಬಹುದೇ?’ ಎಂದು ಅಸಭ್ಯ ಸಂದೇಶ ಕಳುಹಿಸಿದ್ದಾನೆ. ಇದರಿಂದ ಬೆಚ್ಚಿಬಿದ್ದ ನಿತಾರಾ ತಕ್ಷಣ ಗೇಮ್ ಆಫ್ ಮಾಡಿ ತಾಯಿಗೆ ಮಾಹಿತಿ ನೀಡಿದ್ದಾಳೆ.

Advertisement

ಈ ಕುರಿತು ಮಾತನಾಡಿದ್ದ ಅಕ್ಷಯ್ ಕುಮಾರ್, “ಮಕ್ಕಳು ಇಂತಹ ಸಂದರ್ಭಗಳಲ್ಲಿ ತಕ್ಷಣ ಪೋಷಕರಿಗೆ ತಿಳಿಸುವುದು ಅತ್ಯಂತ ಮುಖ್ಯ. ಇದು ಸೈಬರ್ ಅಪರಾಧದ ಒಂದು ಭಾಗವಾಗಿದ್ದು, ಮಕ್ಕಳು ಸುಲಭವಾಗಿ ಮೋಸಹೋಗುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಮಕ್ಕಳ ಆನ್‌ಲೈನ್ ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯವಿದೆ ಎಂದು ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು