ಬಂಟ್ವಾಳ: ಮಹಿಳಾ ಮೀಸಲು ವಿಧೇಯಕ–2023ನ್ನು ಜಾರಿಗೆ ತರಲು ವಿಫಲವಾಗಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮಹಿಳೆಯರನ್ನು ವಂಚಿಸಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಬಿ.ಸಿ.ರೋಡ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಮಹಿಳಾ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಲವು ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಪ್ರಸ್ತುತ ಮಹಿಳಾ ಮೀಸಲು ವಿಧೇಯಕವನ್ನು ದುರುದ್ದೇಶದಿಂದ ತಂದಿದ್ದು, ಅದನ್ನು ಸಮರ್ಪಕವಾಗಿ ಜಾರಿಗೆ ತರಲು ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಈ ವಿಧೇಯಕವನ್ನು ಬಹಳ ಹಿಂದೆಯೇ ಜಾರಿಗೆ ತರಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ವಿರೋಧ: ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಮಹಿಳೆಯರು; ಶಾಸಕಿ ಭಾಗೀರಥಿ ಮುರುಳ್ಯ ಕಿಡಿ!
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ವಿವಿಧ ನಿಗಮಗಳ ಮುಖ್ಯಸ್ಥರಾದ ಮಮತಾ ಗಟ್ಟಿ, ಲಾವಣ್ಯ ಬಲ್ಲಾಳ್, ಶಾಲೆಟ್ ಪಿಂಟೋ ಹಾಗೂ ಪ್ರಮುಖ ನಾಯಕಿಯರಾದ ಉಷಾ ಅಂಚನ್, ಐಡಾ ಸುರೇಶ್, ಜಯಂತಿ ಪೂಜಾರಿ, ಅಮಿತಾ ಭಂಡಾರಿ, ಧನಲಕ್ಷ್ಮಿ ಸಿ. ಬಂಗೇರ, ಜೆಸಿಂಟಾ ಡಿಸೋಜಾ, ಶಬಾನಾ ಕವಳಕಟ್ಟೆ, ಅಸ್ಮಾ ಹಸೈನಾರ್, ಸರಿಕಾ ಪೂಜಾರಿ, ಮಂಜುಳ ಕುಶಾಲ್ ಪೆರಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಲ್ಲದೆ ಆರ್. ಪದ್ಮರಾಜ್, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮೊಹಮ್ಮದ್, ಬಾಲಕೃಷ್ಣ ಅಂಚನ್, ಜೀನತ್ ಬೆಳ್ತಂಗಡಿ, ಚಂದ್ರಶೇಖರ್ ಭಂಡಾರಿ, ಎ.ಬಿ. ಅಬ್ದುಲ್ಲಾ ಕೊಲ್ತಾಡು, ಸುಧರ್ಷಣ ಜೈನ್, ಪಿ.ಬಿ. ವರ್ಗೀಸ್, ಮೋಹನ್ ಶೆಟ್ಟಿ, ಸುಭಾಷ್‌ಚಂದ್ರ ಶೆಟ್ಟಿ, ಶೋಭಾ ಶೆಟ್ಟಿ, ಸಿರಾಜ್ ಮಡಕ್, ಸಿದ್ದಿಕ್ ಸರವು, ಮೊಹಮ್ಮದ್ ನಂದಾವರ್ ಹಾಗೂ ಸುಧೀಪ್ ಕುಮಾರ್ ಶೆಟ್ಟಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

