ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ರದ್ದು: ಆರ್‌ಬಿಐ ಕಠಿಣ ಕ್ರಮ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 24 ರಂದು ರದ್ದುಗೊಳಿಸಿದೆ. ಬ್ಯಾಂಕ್‌ನ ವ್ಯವಹಾರಗಳು ಠೇವಣಿದಾರರ ಹಿತಾಸಕ್ತಿಗೆ ಹಾನಿಕಾರಕವಾಗಿದ್ದು, ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಆರ್‌ಬಿಐ ಪ್ರಕಟಣೆಯಂತೆ, ಏಪ್ರಿಲ್ 24, 2026ರ ಆದೇಶದ ಮೂಲಕ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆ 1949ರ ಸೆಕ್ಷನ್ 22(4) ಅಡಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಿದ್ದ ಲೈಸೆನ್ಸ್ ರದ್ದು ಮಾಡಲಾಗಿದೆ. ಇದರ ಪರಿಣಾಮವಾಗಿ ಬ್ಯಾಂಕ್ ತಕ್ಷಣದಿಂದಲೇ ಸೆಕ್ಷನ್ 5(b) ಅಡಿಯಲ್ಲಿ ವ್ಯಾಖ್ಯಾನಿಸಲಾದ ‘ಬ್ಯಾಂಕಿಂಗ್’ ವ್ಯವಹಾರ ಅಥವಾ ಸೆಕ್ಷನ್ 6 ಅಡಿಯಲ್ಲಿ ಅನುಮತಿಸಲಾದ ಯಾವುದೇ ಹೆಚ್ಚುವರಿ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ.

Advertisement

ಇದಕ್ಕೂ ಜೊತೆಗೆ ಬ್ಯಾಂಕ್ ವಿಂಡಿಂಗ್ ಅಪ್ (ಮುಚ್ಚುವಿಕೆ) ಪ್ರಕ್ರಿಯೆಗೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಆರ್‌ಬಿಐ ತಿಳಿಸಿದೆ.

ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆ ಅಂತಿಮ: ಸಿದ್ದರಾಮಯ್ಯ ಸರ್ಕಾರದ ಕ್ರಾಂತಿಕಾರಿ ನಿರ್ಧಾರ; ಯಾರಿಗೆ ಎಷ್ಟು?

Advertisement

ಲೈಸೆನ್ಸ್ ರದ್ದುಗೊಳಿಸಲು ಆರ್‌ಬಿಐ ಹೇಳಿರುವ ಪ್ರಮುಖ ಕಾರಣಗಳು ಇಂತಿವೆ:

ಬ್ಯಾಂಕ್‌ನ ವ್ಯವಹಾರಗಳು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿವೆ.

ಬ್ಯಾಂಕ್‌ನ ನಿರ್ವಹಣಾ ಸ್ವಭಾವವು ಠೇವಣಿದಾರರ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕವಾಗಿದೆ.

ಬ್ಯಾಂಕ್ ಮುಂದುವರಿಯುವುದರಿಂದ ಯಾವುದೇ ಉಪಯೋಗ ಅಥವಾ ಸಾರ್ವಜನಿಕ ಹಿತಾಸಕ್ತಿ ಪೂರೈಸುವುದಿಲ್ಲ.

ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ನಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿದೆ.

ಪೇಟಿಎಂ ಬ್ಯಾಂಕ್ ಹಿನ್ನೆಲೆ

ಒನ್ 97 ಕಮ್ಯುನಿಕೇಷನ್ಸ್ ಬೆಂಬಲಿತ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ 2015ರ ಆಗಸ್ಟ್‌ನಲ್ಲಿ ಸೀಮಿತ ಬ್ಯಾಂಕಿಂಗ್ ಪರವಾನಗಿ ಪಡೆದಿತ್ತು. ಈ ಪರವಾನಗಿ ಅಡಿಯಲ್ಲಿ ಸಣ್ಣ ಠೇವಣಿಗಳನ್ನು ಸ್ವೀಕರಿಸಲು ಅವಕಾಶ ಇದ್ದರೂ, ಸಾಲ ನೀಡಲು ಅವಕಾಶ ಇರಲಿಲ್ಲ.

ಈಗಾಗಲೇ 2024ರ ಜನವರಿಯಲ್ಲಿ ಆರ್‌ಬಿಐ, ಗ್ರಾಹಕ ಪರಿಶೀಲನೆ (Customer Due Diligence), ನಿಧಿಗಳ ಬಳಕೆ ಹಾಗೂ ತಂತ್ರಜ್ಞಾನ ಮೂಲಸೌಕರ್ಯ ಸಂಬಂಧಿತ ನಿಯಮ ಉಲ್ಲಂಘನೆ ಆರೋಪಿಸಿ ಹೊಸ ಠೇವಣಿಗಳನ್ನು ಸ್ವೀಕರಿಸದಂತೆ ಬ್ಯಾಂಕ್‌ಗೆ ಸೂಚನೆ ನೀಡಿತ್ತು. ಇದಕ್ಕೂ ಮುನ್ನ 2022ರ ಮಾರ್ಚ್ 11ರಿಂದ ಹೊಸ ಗ್ರಾಹಕರ ನೋಂದಣಿ (onboarding) ಸ್ಥಗಿತಗೊಳಿಸುವಂತೆ ಆದೇಶಿಸಲಾಗಿತ್ತು.

ಸೀಮಿತ ಸೇವೆ ಮಾತ್ರ ಲಭ್ಯ

ಬ್ಯಾಂಕ್ ವೆಬ್‌ಸೈಟ್ ಮಾಹಿತಿಯಂತೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈಗಲೂ ಕಾರ್ಯನಿರ್ವಹಿಸುತ್ತಿದ್ದರೂ, ಅದರ ಚಟುವಟಿಕೆಗಳು ಬಹಳ ಮಟ್ಟಿಗೆ ಸೀಮಿತಗೊಂಡಿವೆ. ಗ್ರಾಹಕರು ಈಗಿರುವ ಠೇವಣಿಗಳ ಹಿಂಪಡೆತ (withdrawal) ಮಾತ್ರ ಮಾಡಬಹುದು. ಹೊಸ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ.

ಷೇರು ಮೌಲ್ಯದಲ್ಲಿ ಇಳಿಕೆ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಏಪ್ರಿಲ್ 24ರಂದು ಪೇಟಿಎಂ ಷೇರುಗಳು 0.5% ಇಳಿಕೆಯೊಂದಿಗೆ ರೂ. 1,153ಕ್ಕೆ ವಹಿವಾಟು ಅಂತ್ಯಗೊಂಡಿವೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು