ಬೆಂಗಳೂರು-ಮುಂಬೈ ರೈಲು ಪ್ರಯಾಣಿಕರಿಗೆ ಬಂಪರ್ ಆಫರ್: ಮಂಗಳೂರು ಪ್ರಯಾಣಿಕರಿಗೂ ಬಿಗ್​ ಗುಡ್​​​ ನ್ಯೂಸ್

ಬೆಂಗಳೂರು: ರಾಜ್ಯದ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬೆಂಗಳೂರಿನಿಂದ ಮುಂಬೈ ಮತ್ತು ಕರಾವಳಿ ಭಾಗಕ್ಕೆ ಹೊಸ ರೈಲು ಸೇವೆಗಳನ್ನು ಘೋಷಿಸಿದ್ದಾರೆ. ಈ ಮೂಲಕ ಪ್ರಯಾಣಿಕರ ದಶಕಗಳ ಬೇಡಿಕೆ ಈಡೇರುವ ಸಮಯ ಹತ್ತಿರ ಬಂದಿದೆ.

ಬೆಂಗಳೂರು ಮತ್ತು ಮುಂಬೈ ನಡುವಿನ ರಾತ್ರಿ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲು ವಂದೇ ಭಾರತ್ ಸ್ಲೀಪರ್ ರೈಲಿಗೆ ಅನುಮೋದನೆ ನೀಡಲಾಗಿದೆ.ಈ ರೈಲು ಕಲಬುರಗಿ ಮೂಲಕ ಸಂಚರಿಸಲಿದ್ದು, ಸುಮಾರು 16 ಗಂಟೆಗಳಲ್ಲಿ ಮುಮೈ ತಲುಪಲಿದೆ. ಅಧುನಿಕ ಬೋಗಿಗಳು, ಸುರಕ್ಷಿತ ಕವಚ್ ವ್ಯವಸ್ಥೆ ಮತ್ತು ಐಶಾರಾಮಿ ಸೌಲಭ್ಯಗಳನ್ನು ಇದು ಒಳಗೊಂಡಿದೆ. ಜುಲೈ ಅಂತ್ಯದ ವೇಳೆಗೆ ಈ ಸೇವೆ ಆರಂಭವಾಗುವ ನಿರೀಕ್ಷೆಯಿದೆ.

ಹುಬ್ಬಳ್ಳಿ-ಧಾರವಾಡ ಮೂಲಕ ಹೊಸ ಸೂಪರ್‌ಫಾಸ್ಟ್ ರೈಲು:

ಮುಂಬೈಗೆ ಕೇವಲ ಒಂದು ವಂದೇ ಭಾರತ್ ಮಾತ್ರವಲ್ಲದೆ, ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಮತ್ತೊಂದು ಹೊಸ ಸೂಪರ್‌ಫಾಸ್ಟ್ ಮೇಲ್/ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ. ಇದು ಸುಧಾರಿತ LHB ಬೋಗಿಗಳನ್ನು ಹೊಂದಿರಲಿದ್ದು, ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಮುಂಬೈ ಸಂಪರ್ಕ ಸುಲಭವಾಗಲಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು

ಬೆಂಗಳೂರು – ಮಂಗಳೂರು – ಮಡಗಾಂವ್ ವಂದೇ ಭಾರತ್:

ಕರಾವಳಿ ಮತ್ತು ಮಲೆನಾಡಿನ ಜನರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಬೆಂಗಳೂರಿನಿಂದ ಮಂಗಳೂರು ಮೂಲಕ ಗೋವಾದ ಮಡಗಾಂವ್‌ವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಆರಂಭವಾಗಲಿದೆ. ಶಿರಾಡಿ ಘಾಟ್‌ನ ಕಠಿಣ ಹಾದಿಯಲ್ಲಿ ರೈಲು ಸಂಚರಿಸಲು ಬೇಕಾದ ಎಲೆಕ್ಟ್ರಿಫಿಕೇಶನ್ ಮತ್ತು AEB (ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್) ವ್ಯವಸ್ಥೆ ಪೂರ್ಣಗೊಂಡಿದೆ. ಇದು ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೂ ದೊಡ್ಡ ವೇಗ ನೀಡಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು