ಮೇ 1 ದೇಶದ ಅಭಿವೃದ್ಧಿಯ ಹರಿಕಾರರ ದಿನಾಚರಣೆ: ಎಸ್.ಆರ್.ಸತೀಶ್ಚಂದ್ರ

ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಪುತ್ತೂರು ಎಂಪ್ಲಾಯೀಸ್ ಯೂನಿಯನ್ (ಹಿಂದೂಸ್ತಾನ್ ಮಜುದೂರ್ ಸಂಘ-ಹೆಚ್.ಎಂ.ಎಸ್.) ವತಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇ 1 ರಂದು ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್.ಸತೀಶ್ಚಂದ್ರ, ಮೇ 1 ದೇಶದ ಅಭಿವೃದ್ಧಿಯ ಹರಿಕಾರರ ದಿನಾಚರಣೆಯಾಗಿದೆ ಎಂದರು. ಹಸಿವಿನಿಂದ ಬಂದವನಿಗೆ ಅನ್ನದಾನ‌, ವಿದ್ಯೆ ಕೇಳಿಕೊಂಡು ಬಂದವರಿಗೆ ವಿದ್ಯಾದಾನ, ಹೀಗೆ ಅನೇಕ ದಾನಗಳಿಗೆ ಭಾರತ ಪ್ರಾತಿನಿಧ್ಯ ನೀಡಿದೆ‌. ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಅತಿದೊಡ್ಡ ದಾನವೇ ಮತದಾನವಾಗಿದೆ. ಇವೆಲ್ಲವೂ ದೇಶದ ಪ್ರಜಾಪ್ರಭುತ್ವ, ಸಂಸ್ಕೃತಿ ಉಳಿಸುವ ಭಾಗವಾಗಿದೆ ಎಂದರು.

Advertisement

ಚಾಕಲೇಟ್ ಕಂಪನಿಗಳ ಗೂಗಲ್ ಪಟ್ಟಿಯಲ್ಲಿ ಕ್ಯಾಂಪ್ಕೋ ಎಂಟನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಐದು, ನಾಲ್ಕನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎಂದರು.

ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮನಾಭ ಪಟ್ಟಾಜೆ ಮಾತನಾಡಿ, ಕಾರ್ಮಿಕರ ದಿನಾಚಣೆ ಪ್ರಯುಕ್ತ ರಕ್ತದಾನ ಶಿಬಿರ ನಡೆಸಿರುವುದು ಉತ್ತಮ ವಿಚಾರವಾಗಿದೆ. ನೌಕರರು ಸಂಸ್ಥೆಗಳಿಗೆ ಆಧಾರಸ್ಥಂಭವಾಗಿದ್ದಾರೆ. ಕ್ಯಾಂಪ್ಕೋ ನೌಕರರ ಒಳಿತಿಗಾಗಿ ಶ್ರಮಿಸುತ್ತಾ ಬರುತ್ತಿದೆ. ಪರಿಣಾಮ ಸಂಸ್ಥೆಯ ಅಭಿವೃದ್ಧಿಯಲ್ಲಿ ನೌಕರರು ಅವಿರತ ಶ್ರಮ ಹಾಕುತ್ತಿದ್ದಾರೆ ಎಂದು ಹೇಳಿ ಕಾರ್ಮಿಕ ದಿನಾಚರಣೆಗೆ ಶುಭಾಶಯ ತಿಳಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಎಂ.ಎಸ್. ಯೂನಿಯನ್ ಗೌರವಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಕಾರ್ಮಿಕರಿಗೆ ನೀಡಬೇಕಾದ ಎಲ್ಲಾ ಸವಲತ್ತುಗಳನ್ನು ಕಲ್ಪಿಸಿದರೆ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿ ಶುಭಕೋರಿದರು.

ಯೂನಿಯನ್ ಅಧ್ಯಕ್ಷ ತೀರ್ಥರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿದಿನ ಬೇರೆ ಕಾರ್ಯಗಳಲ್ಲಿ ಕಾರ್ಮಿಕರು ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಮನರಂಜನೆ ಸಿಗಲಿ ಎನ್ನುವ ದೃಷ್ಟಿಯಿಂದ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಮಂಗಳೂರು ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ ಕೆ., ಪುರುಷೋತ್ತಮ ಭಟ್ ಎಂ., ಮುರಳಿಕೃಷ್ಣ ಕೆ.ಆರ್., ತೀರ್ಥರಾಮ ಎ.ವಿ., ಗಣೇಶ್, ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಪುತ್ತೂರು ಡಿಜಿಎಂ ಶ್ಯಾಮ್ ಪ್ರಸಾದ್, ಎಜಿಎಂ ಪ್ರಭಾಕರ್ ಎಸ್., ಸಿಸಿಎಫ್ ಎಂಪ್ಲಾಯೀಸ್ ರಿಕ್ರಿಯೇಶನ್ ಸೆಂಟರ್ ಅಧ್ಯಕ್ಷ ಈಶ್ವರ್, ವಕೀಲ ಮಹೇಶ್ ಕಜೆ ಉಪಸ್ಥಿತರಿದ್ದರು.

ಇದನ್ನೂ ಓದಿ: ದೇಶದಲ್ಲೇ ಮೊದಲು: ಮಂಗಳೂರಿನಲ್ಲಿ 12.5 ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹ; ವಿಶಿಷ್ಟ ಅಭಿಯಾನ ಯಶಸ್ವಿ!

ಕಾರ್ಮಿಕರ ದಿನಾಚರಣೆ ಪ್ರಯುಕ್ತ ಬೆಳಗ್ಗೆ ನಡೆದ ರಕ್ತದಾನ ಶಿಬಿರದಲ್ಲಿ ನೌಕರರು ಒಟ್ಟು 21 ಯುನಿಟ್ ರಕ್ತ ದಾನ ಮಾಡಿದ್ದಾರೆ.

ಸಭಾ ಕಾರ್ಯಕ್ರಮದ ಮುನ್ನ ವಿವಿಧ ವಿನೋದಾವಳಿಗಳು, ಸಂಘದ ಸದಸ್ಯರು ಮತ್ತು ಮನೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭೆಯ ಬಳಿಕ ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ ಕಲಾವಿದರಿಂದ ನೃತ್ಯವೈಭವ ನಡೆಯಿತು.

ಇತ್ತೀಚೆಗೆ ನಿವೃತ್ತರಾದ ಗುರುಮೂರ್ತಿ, ರವಿ ಪೂಜಾರಿ, ಗಣೇಶ್ ಭಟ್ ಸಿ.ಎಚ್. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು