ಬೆಂಗಳೂರು: ಕರ್ನಾಟಕದ ರುಚಿಕರವಾದ ತಿಂಡಿಗಳಾದ ಮಸಾಲೆ ದೋಸೆ ಮತ್ತು ನೀರ್ ದೋಸೆ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ವಿಶ್ವದ ಅತ್ಯುತ್ತಮ 100 ಆಹಾರಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ನಮ್ಮ ಕರಾವಳಿ ಮತ್ತು ಮಲೆನಾಡಿನ ನೆಚ್ಚಿನ ‘ನೀರ್ ದೋಸೆ’ ಹಾಗೂ ವಿಶ್ವವಿಖ್ಯಾತ ‘ಮಸಾಲೆ ದೋಸೆ’ ಹೆಮ್ಮೆಯ ಸ್ಥಾನ ಪಡೆದುಕೊಂಡಿವೆ.
ಕರಾವಳಿ ಮತ್ತು ಮಲೆನಾಡು ಭಾಗದ ಮನೆಮನೆಗಳಲ್ಲಿ ಪ್ರತಿದಿನ ತಯಾರಾಗುವ ಮೃದುವಾದ ನೀರ್ ದೋಸೆ, ಜಾಗತಿಕ ಪಟ್ಟಿಯಲ್ಲಿ 84ನೇ ಸ್ಥಾನವನ್ನು ಅಲಂಕರಿಸಿದೆ.

ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಮಸಾಲೆ ದೋಸೆಯು 4.3 ಸ್ಟಾರ್ ರೇಟಿಂಗ್‌ನೊಂದಿಗೆ ವಿಶ್ವದ ಟಾಪ್ 6ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಕರ್ನಾಟಕದ ಆಹಾರ ಸಂಸ್ಕೃತಿಗೆ ಸಂದ ಜಯವಾಗಿದೆ.
ಇದನ್ನೂ ಓದಿ: Lifestyle: ಭಾರತದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರನ್ನು ಕಾಡುವ ನಿದ್ರಾಹೀನತೆ

ಒಟ್ಟು 100 ಖಾದ್ಯಗಳ ಈ ಪಟ್ಟಿಯಲ್ಲಿ ಭಾರತದ 11 ತಿಂಡಿಗಳು ಸ್ಥಾನ ಪಡೆದಿವೆ ಎಂಬುದು ಭಾರತೀಯ ಆಹಾರ ಪ್ರಿಯರಿಗೆ ಹೆಮ್ಮೆಯ ವಿಷಯ.ಸಿನಿಮಾ ಹೆಸರಾಗಿ ಮಾತ್ರವಲ್ಲದೆ, ಈಗ ಜಾಗತಿಕವಾಗಿ ಅತ್ಯುತ್ತಮ ಆಹಾರವಾಗಿಯೂ ನೀರ್ ದೋಸೆ ಗುರುತಿಸಿಕೊಂಡಿರುವುದು ಕನ್ನಡಿಗರ ಖುಷಿಯನ್ನು ಇಮ್ಮಡಿಗೊಳಿಸಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

