ಚೆನ್ನೈ ಏರ್‌ಪೋರ್ಟ್‌: ಏರ್ ಅರೇಬಿಯಾ ವಿಮಾನದ ತುರ್ತು ಬಾಗಿಲು ತೆರೆದು ಜಿಗದ ಪ್ರಯಾಣಿಕ!

Air Arabia Flight Emergency

ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗಿನ ಜಾವ ವಿಚಿತ್ರ ಘಟನೆ ನಡೆದಿದೆ. ಶಾರ್ಜಾದಿಂದ ಬಂದ ಏರ್ ಅರೇಬಿಯಾ ವಿಮಾನದ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರವನ್ನು ತೆರೆದು, ವಿಮಾನ ಟ್ಯಾಕ್ಸಿಂಗ್ ವೇಳೆ ಕೆಳಕ್ಕೆ ಜಿಗಿದ ಘಟನೆ ಸಂಚಾರದಲ್ಲಿ ತಾತ್ಕಾಲಿಕ ಅಸ್ತವ್ಯಸ್ತತೆಗೆ ಕಾರಣವಾಯಿತು.

ಶಾರ್ಜಾದಿಂದ ಹೊರಟ ಏರ್ ಅರೇಬಿಯಾ G9-471 (ಎಯರ್‌ಬಸ್ A320) ವಿಮಾನವು ಬೆಳಿಗ್ಗೆ ಸುಮಾರು 3:23ಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು. ಭೂಸ್ಪರ್ಶವಾದ ಕೇವಲ ಒಂದು ನಿಮಿಷದೊಳಗೆ ಟ್ಯಾಕ್ಸಿವೇನಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನವನ್ನು ತಕ್ಷಣ ನಿಲ್ಲಿಸಲಾಯಿತು.

Advertisement

ಘಟನೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ 3:25ಕ್ಕೆ ಮುಖ್ಯ ರನ್‌ವೇ (07/25) ಅನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಇದರಿಂದ ಕೆಲ ಸಮಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

29 ವರ್ಷದ ಮೊಹಮ್ಮದ್ ಶೆರಿಫ್ ಮೊಹಮ್ಮದ್ ನಜ್ಮುದ್ದೀನ್ ಎಂಬ ಪ್ರಯಾಣಿಕನು ಟ್ಯಾಕ್ಸಿವೇ ‘V’ ಬಳಿ ತುರ್ತು ದ್ವಾರದಿಂದ ಜಿಗಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಸಿಬ್ಬಂದಿ ತಕ್ಷಣ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ, ಪ್ರಯಾಣಿಕನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: ಮೇ ಹೀಟ್‌ವೇವ್ ಕಾಟ: ಕರಾವಳಿಯಲ್ಲಿ ಡೇ-ನೈಟ್‌ ಬಿಸಿಬಿಸಿ! ಕೆಲಸಗಾರರೇ ಎಚ್ಚರ..

ಘಟನೆಯ ಬಳಿಕ 4:35ಕ್ಕೆ ರನ್‌ವೇ ಕಾರ್ಯಾಚರಣೆ ಮರು ಆರಂಭವಾಯಿತು. ಈ ಅವಧಿಯಲ್ಲಿ ಕೆಲವು ವಿಮಾನಗಳನ್ನು ಪರ್ಯಾಯ ರನ್‌ವೇ (12/30) ಮೂಲಕ ಸಂಚಾರ ಮಾಡಿಸಲಾಯಿತು.

ರನ್‌ವೇ ಮುಚ್ಚಿದ್ದರಿಂದ ಲಂಡನ್‌ನಿಂದ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್ BA0035 ವಿಮಾನವನ್ನು ಬೆಂಗಳೂರು ಕಡೆಗೆ ತಿರುಗಿಸಲಾಯಿತು. ಅಲ್ಲದೆ ದೋಹಾ, ಅಹಮದಾಬಾದ್ ಮತ್ತು ದುಬೈಗೆ ತೆರಳಬೇಕಿದ್ದ ಕನಿಷ್ಠ ಐದು ವಿಮಾನಗಳು 35-40 ನಿಮಿಷಗಳವರೆಗೆ ವಿಳಂಬವಾದವು.

ಈ ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕನು ಮಾನಸಿಕ ಅಸ್ಥಿರತೆಯ ಕಾರಣದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿಕೊಂಡಿದ್ದರೂ, ಭದ್ರತಾ ಸಂಸ್ಥೆಗಳು ಹೆಚ್ಚಿನ ತನಿಖೆ ಮುಂದುವರಿಸಿವೆ.

ಇದರಿಂದ ಶಾರ್ಜಾಗೆ ಹಿಂತಿರುಗಬೇಕಿದ್ದ G9-472 ವಿಮಾನವು ಸುಮಾರು ಮೂರು ಗಂಟೆಗಳಷ್ಟು ವಿಳಂಬವಾಗಿ ಬೆಳಗ್ಗೆ 7:41ಕ್ಕೆ 109 ಪ್ರಯಾಣಿಕರೊಂದಿಗೆ ಪ್ರಯಾಣ ಆರಂಭಿಸಿತು.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು