ಸಂಜು ಸ್ಯಾಮ್ಸನ್ ಅಬ್ಬರ: ಡೆಲ್ಲಿಯನ್ನು ಮಣಿಸಿದ ಚೆನ್ನೈಗೆ ಭರ್ಜರಿ ಜಯ

IPL CSK vs DC Match highlights

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 48ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ತಂಡದ ಪರ ಸಮೀರ್ ರಿಜ್ವಿ ಅಜೇಯ 40 ರನ್‌ಗಳೊಂದಿಗೆ ಶ್ರೇಷ್ಠ ಪ್ರದರ್ಶನ ನೀಡಿದರು. ತ್ರಿಸ್ಟನ್ ಸ್ಟಬ್ಸ್ 38 ರನ್ ಗಳಿಸಿದರೆ, ಪತುಮ್ ನಿಸ್ಸಂಕ 19, ಕೆಎಲ್ ರಾಹುಲ್ 12, ನಿತೀಶ್ ರಾಣಾ 15, ಕರುಣ್ ನಾಯರ್ 13, ಅಕ್ಷರ್ ಪಟೇಲ್ 2 ಹಾಗೂ ಆಶುತೋಶ್ ಶರ್ಮಾ 14 ರನ್ ಗಳಿಸಿದರು.

ಇದನ್ನೂ ಓದಿ: ಲಕ್ನೋ ಬೌಲರ್ಸ್ ದಂಡಿಸಿದ ರೋಹಿತ್, ರಿಕೆಲ್ಟನ್; ಮುಂಬೈಗೆ ಭರ್ಜರಿ ಗೆಲುವು

ಚೆನ್ನೈ ಪರ ನೂರ್ ಅಹ್ಮದ್ 2 ವಿಕೆಟ್ ಪಡೆದರೆ, ಮುಕೇಶ್ ಚೌಧರಿ, ಅಕೀಲ್ ಹೋಸೈನ್, ಗುರ್ಜಪ್ನೀತ್ ಸಿಂಗ್ ಮತ್ತು ಜೇಮೀ ಓವರ್ಟನ್ ತಲಾ 1 ವಿಕೆಟ್ ಕಬಳಿಸಿದರು.

156 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ 17.3 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿ ಸುಲಭವಾಗಿ ಜಯ ಸಾಧಿಸಿತು. ತಂಡದ ಗೆಲುವಿಗೆ ಸಂಜು ಸ್ಯಾಮ್ಸನ್ ಮುಖ್ಯ ಕಾರಣರಾಗಿದ್ದು, ಅವರು 52 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 87 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

ಇವರಿಗೆ ಉತ್ತಮ ಸಾಥ್ ನೀಡಿದ ಕಾರ್ತಿಕ್ ಶರ್ಮಾ ಅಜೇಯ 41 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ 6 ಹಾಗೂ ಉರ್ವಿಲ್ ಪಟೇಲ್ 17 ರನ್ ಸೇರಿಸಿದರು. ಡೆಲ್ಲಿ ಪರ ಲುಂಗಿ ಎನ್ಗಿಡಿ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು