ಬೆಂಗಳೂರು: ‘ಸು ಫ್ರಮ್ ಸೋ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ ನಿರ್ದೇಶಕ ಜೆಪಿ ತುಮಿನಾಡು ಅವರು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಶ್ಮಿಕಾ ಎಂಬುವವರ ಜೊತೆ ಜೆಪಿ ಹೊಸ ಜೀವನ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ಸಮಾರಂಭ ನಡೆದಿದ್ದು, ವಿವಾಹ ಮಂಟಪವು ಅತ್ಯಂತ ಅದ್ದೂರಿಯಾಗಿ ಕಂಗೊಳಿಸುತ್ತಿದೆ. ‘ಸು ಫ್ರಮ್ ಸೋ’ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಸಣ್ಣ ವಿರಾಮ ಪಡೆದಿದ್ದ ಜೆಪಿ, ಈಗ ಜೀವನದ ಪ್ರಮುಖ ನಿರ್ಧಾರ ಕೈಗೊಂಡು ಮದುವೆಯಾಗಿದ್ದಾರೆ.
ಇದನ್ನೂ ಓದಿ:ವೈರಲ್ ಸುಂದರಿ ಮೊನಾಲಿಸಾಗೆ ಶಾಕ್ ನೀಡಿದ ನಿರ್ದೇಶಕ! ನಟಿಸುತ್ತಿದ್ದ ಮೊದಲ ಸಿನಿಮಾವೇ ರದ್ದು
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೆಪಿ ಹಾಗೂ ರಶ್ಮಿಕಾ ಅವರ ವಿವಾಹದ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇಬ್ಬರೂ ಸಂಪ್ರದಾಯಬದ್ಧ ಉಡುಪಿನಲ್ಲಿ ಮಿಂಚುತ್ತಿದ್ದು, ಸಿನಿರಂಗದ ಗಣ್ಯರು ಮತ್ತು ಅಭಿಮಾನಿಗಳು ಈ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

