ತಾಯಿ-ಮಗು ಆರೋಗ್ಯ ಮೇಲ್ವಿಚಾರಣೆಗೆ ಕೇಂದ್ರದ ಹೊಸ ಡಿಜಿಟಲ್ ವ್ಯವಸ್ಥೆ

ಕೇಂದ್ರ ಸರ್ಕಾರವು ತಾಯಿ ಮತ್ತು ಶಿಶು ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ “JANANI” ಎಂಬ ಡಿಜಿಟಲ್ ವೇದಿಕೆಯನ್ನು ಆರಂಭಿಸಿದೆ. ಈ ವೇದಿಕೆ ಆರೋಗ್ಯ ಸೇವೆಗಳ ಡಿಜಿಟಲೀಕರಣ, ಗರ್ಭಿಣಿಯರ ನೋಂದಣಿ, ಮಕ್ಕಳ ಲಸಿಕೆ ಮೇಲ್ವಿಚಾರಣೆ ಹಾಗೂ ಪೌಷ್ಠಿಕತೆ ಸಂಬಂಧಿತ ಮಾಹಿತಿಯನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸಲು ಸಹಾಯ ಮಾಡಲಿದೆ.

JANANI ವೇದಿಕೆಯ ಪ್ರಮುಖ ವೈಶಿಷ್ಟ್ಯಗಳು:

ABHA, ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳ ಮೂಲಕ ಫಲಾನುಭವಿಗಳ ನೋಂದಣಿ

ದೇಶವ್ಯಾಪಿ beneficiary search ವ್ಯವಸ್ಥೆ

U-WIN ಮತ್ತು POSHAN ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಪರ್ಕ

ತಾಯಿ ಮತ್ತು ಮಕ್ಕಳ ಆರೋಗ್ಯದ ಸಮಗ್ರ ಮೇಲ್ವಿಚಾರಣೆ

ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳ ಸಮನ್ವಯಕ್ಕೆ ನೆರವು

ಈ ಡಿಜಿಟಲ್ ವೇದಿಕೆಯನ್ನು ಇತ್ತೀಚೆಗೆ ನಡೆದ “National Summit on Innovation and Inclusivity” ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಪ್ರಕಾರ, ಈ ವ್ಯವಸ್ಥೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಮಹಿಳೆಯರಿಗೆ ಸಮಯೋಚಿತ ಆರೋಗ್ಯ ಸೇವೆ ತಲುಪಿಸಲು ಸಹಾಯಕವಾಗಲಿದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು