ಮುಂಬೈ: ಬಾಲಿವುಡ್ನ ‘ನಾಗಿಣಿ’ ಖ್ಯಾತಿಯ ನಟಿ ಮೌನಿ ರಾಯ್ ಮತ್ತು ಬೆಂಗಳೂರು ಮೂಲದ ಉದ್ಯಮಿ ಸೂರಜ್ ನಂಬಿಯಾರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಬಿಟೌನ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಸದಾ ಪ್ರೇಮಪಕ್ಷಿಗಳಂತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ದಂಪತಿ, ಈಗ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡುವ ಮೂಲಕ ವಿಚ್ಛೇದನದ ವದಂತಿಗೆ ಪುಷ್ಟಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಸಂಬಂಧದ ಸ್ಥಿತಿಗತಿಯನ್ನು ತಿಳಿಸುವ ಮೊದಲ ಸಂಕೇತವೆಂದರೆ ಅನ್ಫಾಲೋ ಮಾಡುವುದು. ಮೌನಿ ಮತ್ತು ಸೂರಜ್ ಇಬ್ಬರೂ ಈಗ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿಲ್ಲ. ಸೂರಜ್ ನಂಬಿಯಾರ್ ಅವರು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಿಂದ ಮದುವೆಯ ಕೆಲವು ಪ್ರಮುಖ ಫೋಟೋಗಳನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಆದರೆ ಮೌನಿ ರಾಯ್ ಅವರ ಖಾತೆಯಲ್ಲಿ ಮದುವೆಯ ಫೋಟೋಗಳು ಇನ್ನೂ ಹಾಗೆಯೇ ಇವೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸಿನಿಮಾ ಸ್ಟೈಲ್ ಕಳ್ಳತನ: ಮನೆಯಿಂದ ಎಸ್ಕೇಪ್ ಆಗುವಾಗ ಗೇಟ್ ಸರಳಿನಲ್ಲಿ ಸಿಲುಕಿಕೊಂಡ ಕಳ್ಳ!
ಮೂಲಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಈ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಸೂರಜ್ ನಂಬಿಯಾರ್ ಅವರು ಮೂಲತಃ ಬೆಂಗಳೂರಿನ ಜೈನ್ ಕುಟುಂಬಕ್ಕೆ ಸೇರಿದವರಾಗಿದ್ದು, ದುಬೈನಲ್ಲಿ ಯಶಸ್ವಿ ಹೂಡಿಕೆ ಬ್ಯಾಂಕರ್ ಆಗಿದ್ದಾರೆ. ಮೌನಿ ಮತ್ತು ಸೂರಜ್ 2022ರ ಜನವರಿ 27 ರಂದು ಗೋವಾದಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹವಾಗಿದ್ದರು. ಕೇವಲ ನಾಲ್ಕು ವರ್ಷಗಳಲ್ಲೇ ಈ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


