ಬೆಂಗಳೂರು: ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸಮವಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2022ರ ವಿವಾದಿತ ಆದೇಶವನ್ನು ಹಿಂಪಡೆದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಹೊಸ ಆದೇಶವು ಧಾರ್ಮಿಕ ಮತ್ತು ಸಾಂಪ್ರದಾಯಿಕ ಪದ್ಧತಿಗಳಿಗೆ ಅವಕಾಶ ನೀಡಿದೆಯಾದರೂ, ಕೆಲವು ವಿಷಯಗಳಲ್ಲಿ ಕುತೂಹಲಕಾರಿ ಮೌನ ವಹಿಸಿದೆ.
ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಪೇಟ/ಟರ್ಬನ್, ಜನಿವಾರ ಅಥವಾ ಪವಿತ್ರ ದಾರ, ಶಿವದಾರ, ರುದ್ರಾಕ್ಷಿ ಹಾಗೂ ತಲೆವಸ್ತ್ರ ಅಥವಾ ಹಿಜಾಬ್ (Headscarf) ಧರಿಸಲು ಹೊಸ ಆದೇಶದಲ್ಲಿ ಮುಕ್ತ ಅವಕಾಶ ನೀಡಲಾಗಿದೆ. ಯಾವುದೇ ತಾರತಮ್ಯವಿಲ್ಲದೆ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ವಸ್ತ್ರ ಸಂಕೇತಗಳನ್ನು ಧರಿಸಲು ಸಾಂವಿಧಾನಿಕವಾಗಿ ಸಮತೋಲಿತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕದ ದೇವಸ್ಥಾನಗಳ ಆದಾಯದಲ್ಲಿ ನವ ದಾಖಲೆ: ಕುಕ್ಕೆಗೆ 167 ಕೋಟಿ ರೂ., ಕೊಲ್ಲೂರಿಗೆ 85 ಕೋಟಿ ರೂ. ಕಾಣಿಕೆ!
ಕುತೂಹಲಕಾರಿ ಸಂಗತಿಯೆಂದರೆ, ಈ ಹಿಂದೆ ಹಿಜಾಬ್ಗೆ ಪ್ರತಿಯಾಗಿ ಸುದ್ದಿಯಾಗಿದ್ದ ಕೇಸರಿ ಶಾಲ್ ಧರಿಸುವಿಕೆ ಬಗ್ಗೆ ಆದೇಶದಲ್ಲಿ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ. ಹಾಗೆಯೇ ಸಿಂಧೂರ, ಕುಂಕುಮ ಮತ್ತು ವಿಭೂತಿ ಧರಿಸುವಿಕೆಯ ಬಗ್ಗೆಯೂ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


