ಬೆಂಗಳೂರು: ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆಯು ಮಿಶ್ರ ಪ್ರತಿಕ್ರಿಯೆಯ ಸುದ್ದಿ ನೀಡಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯಿಂದಾಗಿ ಪ್ರೀಮಿಯಂ ಬ್ರಾಂಡ್‌ನ ಬಿಯರ್ ಮತ್ತು ವಿಸ್ಕಿಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೆ, ಸಾಮಾನ್ಯ ಜನರು ಬಳಸುವ ಮದ್ಯದ ದರ ಏರಿಕೆಯಾಗಿದೆ.
ಹೊಸ ನೀತಿಯನ್ವಯ ಪ್ರೀಮಿಯಂ ಬಿಯರ್‌ಗಳ ಬೆಲೆಯಲ್ಲಿ ಶೇ. 20 ರಿಂದ 25 ರಷ್ಟು ಇಳಿಕೆಯಾಗಿದೆ.
ಕಿಂಗ್‌ಫಿಶರ್ ಪ್ರೀಮಿಯಂ: 650ML ಬಾಟಲಿಯ ಮೇಲೆ ಸುಮಾರು 75 ರೂ. ಕಡಿತವಾಗಿದೆ.
ಹೈನೆಕೆನ್ ಮತ್ತು ಬಡ್‌ವೈಸರ್: ಇವುಗಳ ಮೇಲೆ 20 ರಿಂದ 70 ರೂ.ಗಳವರೆಗೆ ರಿಯಾಯಿತಿ ಸಿಗಲಿದೆ.
ಪ್ರೀಮಿಯಂ ಸ್ಕಾಚ್ ಅಗ್ಗ: ವಿದೇಶಿ ಬ್ರಾಂಡ್‌ನ ಸ್ಕಾಚ್ ಮತ್ತು ವಿಸ್ಕಿಗಳ ಬೆಲೆ ಬಾಟಲಿಗೆ ಸಾವಿರ ರೂಪಾಯಿಗಳಷ್ಟು ಕಡಿಮೆಯಾಗಿದೆ. ಈ ಹಿಂದೆ 5,190 ರೂ. ಇದ್ದ ‘ಬ್ಲ್ಯಾಕ್ ಲೇಬಲ್’ ಈಗ 4,100 ರೂ. ಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ; ನಾಳೆಯಿಂದ ಭಾರೀ ಮಳೆಯ ಮುನ್ಸೂಚನೆ!
ಸಾಮಾನ್ಯ ಮದ್ಯಪ್ರಿಯರಿಗೆ ಬರೆ: ಪ್ರೀಮಿಯಂ ಮದ್ಯ ಅಗ್ಗವಾಗಿದ್ದರೆ, ಕಡಿಮೆ ದರದ ಮದ್ಯದ ಬೆಲೆ ಏರಿಕೆಯಾಗಿದೆ. ಸರ್ಕಾರವು ತೆರಿಗೆ ಸ್ಲ್ಯಾಬ್‌ಗಳನ್ನು 16 ರಿಂದ 8ಕ್ಕೆ ಇಳಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಕೆಳಮಟ್ಟದ ಸ್ಲ್ಯಾಬ್‌ಗಳಲ್ಲಿ ಬರುವ ಮದ್ಯದ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


