ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮುಂಗಾರು ಪೂರ್ವ (Pre-monsoon) ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ನಾಳೆಯಿಂದ (ಮೇ 13) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯ ತಮಿಳುನಾಡು ಕರಾವಳಿ ಸಮೀಪ ಮೇ 12ರ ಸುಮಾರಿಗೆ ವಾಯುಭಾರ ಕುಸಿತ (Depression) ಉಂಟಾಗುವ ಸಾಧ್ಯತೆಯಿದೆ. ಇದರ ಪ್ರಭಾವದಿಂದಾಗಿ ಹವಾಮಾನದ ಮಾದರಿಯಲ್ಲಿ ಬದಲಾವಣೆಯಾಗಲಿದ್ದು, ದಕ್ಷಿಣ ಭಾರತದಾದ್ಯಂತ ಮಳೆ ಮಾರುತಗಳು ಚುರುಕುಗೊಳ್ಳಲಿವೆ.
ಮೇ 13ರಿಂದ ಕರಾವಳಿಯಾದ್ಯಂತ ಗುಡುಗು ಮತ್ತು ಮಿಂಚು ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಕೇರಳ ಮತ್ತು ತಮಿಳುನಾಡಿನ ಹಲವು ಭಾಗಗಳಲ್ಲಿಯೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿ ಜಾರಿ; ಸ್ಥಳೀಯ ಮದ್ಯ ದುಬಾರಿ, ಪ್ರೀಮಿಯಂ ಬ್ರ್ಯಾಂಡ್ ಅಗ್ಗ!
ಮೇ 15ರಿಂದ ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದಲ್ಲಿ ನೈಋತ್ಯ ಮುಂಗಾರು ಮಾರುತಗಳ ಚಲನೆ ತೀವ್ರಗೊಳ್ಳಲಿದ್ದು, ಇದು ಕರಾವಳಿಯುದ್ದಕ್ಕೂ ಬಲವಾದ ಪ್ರೀ-ಮನ್ಸೂನ್ ಮಳೆಗೆ ದಾರಿ ಮಾಡಿಕೊಡಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


