ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ನಟ ರವಿ ಮೋಹನ್: “ವಿಚ್ಛೇದನ ಸಿಗುವವರೆಗೂ ಸಿನಿಮಾ ಮಾಡಲ್ಲ, ನನ್ನ ಜೀವಕ್ಕೆ ಅವರೇ ಹೊಣೆ!”

ಚೆನ್ನೈ: ತಮಿಳು ಚಿತ್ರರಂಗದ ಪ್ರಮುಖ ನಟ ರವಿ ಮೋಹನ್ ಪ್ರೆಸ್‌ಮೀಟ್‌ ಒಂದರಲ್ಲಿ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತಮ್ಮ ವೈಯಕ್ತಿಕ ಜೀವನ ಹಾಗೂ ವಿಚ್ಛೇದನದ (Divorce) ಹೋರಾಟದ ಕುರಿತು ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿದ ಅವರು, ಪತ್ನಿಯ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

“ನನಗೆ ಅಧಿಕೃತವಾಗಿ ವಿಚ್ಛೇದನ ಸಿಗುವವರೆಗೂ ನಾನು ಯಾವುದೇ ಹೊಸ ಸಿನಿಮಾಗಳಲ್ಲಿ ನಟಿಸುವುದಿಲ್ಲ” ಎಂದು ರವಿ ಮೋಹನ್ ಸ್ಪಷ್ಟಪಡಿಸಿದ್ದಾರೆ. ಕೌಟುಂಬಿಕ ಒತ್ತಡ ಮತ್ತು ಮಾನಸಿಕ ಸಂಘರ್ಷಗಳೇ ಇದಕ್ಕೆ ಕಾರಣ ಎಂದು ಅವರು ಪರೋಕ್ಷವಾಗಿ ತಿಳಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:,

ನನ್ನ ಜೀವಕ್ಕೆ ಅವರೇ ಜವಾಬ್ದಾರರು:

ತಮ್ಮ ಜೀವಕ್ಕೆ ಇರುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ನಟ, “ಒಂದು ವೇಳೆ ನನಗೆ ಏನಾದರೂ ಸಂಭವಿಸಿದರೆ, ಅದಕ್ಕೆ ನನ್ನ ಪತ್ನಿಯ ಕುಟುಂಬದವರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ನಾನು ಬದುಕಿರುವುದು ಅವರಿಗೆ ಇಷ್ಟವಿಲ್ಲದಂತಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ತೀರ್ಪು: ಭೋಜಶಾಲಾ ಸಂಕೀರ್ಣ ಸರಸ್ವತಿ ದೇವಸ್ಥಾನ ಎಂದ ಹೈಕೋರ್ಟ್; ಮುಸ್ಲಿಮರ ಪ್ರಾರ್ಥನೆಗೆ ನೀಡಿದ್ದ 2003ರ ಆದೇಶ ರದ್ದು!

ಮಕ್ಕಳನ್ನು ನೋಡಲು ಬಿಡುತ್ತಿಲ್ಲ:

ತಮ್ಮ ಇಡೀ ಭಾಷಣದಲ್ಲಿ ಮಕ್ಕಳನ್ನು ನೆನೆದು ಮರುಗಿದ ರವಿ, “ಅವರು ನನ್ನನ್ನು ನನ್ನ ಮಕ್ಕಳೊಂದಿಗೆ ಭೇಟಿಯಾಗಲು ಬಿಡುತ್ತಿಲ್ಲ. ನಾನು ಇಂದು ಬದುಕಿರುವುದೇ ನನ್ನ ಮಕ್ಕಳಿಗಾಗಿ. ನನ್ನ ಮಕ್ಕಳು ಮುಂದೆಂದಾದರೂ ಈ ವಿಡಿಯೋವನ್ನು ಖಂಡಿತಾ ನೋಡಬೇಕು…” ಎಂದು ಹೇಳುತ್ತಾ ಮಾಧ್ಯಮಗಳ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಕರಾವಳಿ ಹಾಗೂ ತಮಿಳುನಾಡು ಸೇರಿದಂತೆ ಇಡೀ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರಲ್ಲಿ ಈ ವಿಡಿಯೋ ಮತ್ತು ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು