IPL: ಮುಂಬೈ ವಿರುದ್ಧ ಗೆದ್ದು ಪ್ಲೇಆಫ್‌ಗೆ ರಾಯಲ್‌ ಎಂಟ್ರಿ ಕೊಟ್ಟ ರಾಜಸ್ಥಾನ

IPL MI vs RR Match Highlights in Kannada

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 69ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲನದ ಪ್ರದರ್ಶನ ನೀಡಿದ ರಾಜಸ್ಥಾನ, ಮುಂಬೈಗೆ ಸೋಲಿನ ರುಚಿ ತೋರಿಸಿತು. ಆ ಮೂಲಕ ಪ್ಲೇಆಫ್‌ಗೆ ರಾಯಲ್‌ ಎಂಟ್ರಿ ಕೊಟ್ಟಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ತಂಡದ ಪರ ಧ್ರುವ್ ಜುರೆಲ್‌ 38 ರನ್‌ಗಳೊಂದಿಗೆ ಪ್ರಮುಖ ಕೊಡುಗೆ ನೀಡಿದರೆ, ಜೋಫ್ರಾ ಆರ್ಚರ್‌ ಸಿಡಿಲಬ್ಬರದ 32 ರನ್‌, ದುಸಾನ್ ಶನಕ 29 ರನ್‌ (ರನ್‌ ಔಟ್) ಹಾಗೂ ಯಶಸ್ವಿ ಜೈಸ್ವಾಲ್‌ 27 ರನ್‌ ಬಾರಿಸಿದರು. ರಿಯಾನ್ ಪರಾಗ್‌ 14, ಡೊನೊವನ್ ಫೆರೇರಾ 18, ರವೀಂದ್ರ ಜಡೇಜಾ ಅಜೇಯ 19 ಮತ್ತು ನಾಂಡ್ರೆ ಬರ್ಗರ್‌ ಅಜೇಯ 10 ರನ್‌ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ವೈಭವ್ ಸೂರ್ಯವಂಶಿ ಕೇವಲ 4 ರನ್‌ಗೆ ನಿರ್ಗಮಿಸಿದರು.

ಮುಂಬೈ ಪರ ದೀಪಕ್ ಚಹಾರ್‌ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್‌ ಪಡೆದರೆ, ಅಲ್ಲಾ ಗಜನ್ಫರ್‌, ಕಾರ್ಬಿನ್ ಬಾಷ್‌ ಹಾಗೂ ವಿಲ್ ಜ್ಯಾಕ್ಸ್‌ ತಲಾ 1 ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ: IPL: ಶ್ರೇಯಸ್ ಅಯ್ಯರ್ ಶತಕದಾಟ, ಲಕ್ನೋ ವಿರುದ್ಧ ಪಂಜಾಬ್’ಗೆ ಗೆಲುವು

206 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಕುಸಿತ

206 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 175 ರನ್‌ಗಳಿಗೆ ಸೀಮಿತವಾಯಿತು.

ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಶೂನ್ಯಕ್ಕೆ ಔಟ್‌ ಆಗಿದ್ದು ತಂಡಕ್ಕೆ ದೊಡ್ಡ ಆಘಾತವಾಯಿತು. ಸೂರ್ಯಕುಮಾರ್ ಯಾದವ್‌ 60 ರನ್‌ಗಳ ಹೋರಾಟದ ಇನ್ನಿಂಗ್ಸ್‌ ಆಡಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹಾರ್ದಿಕ್ ಪಾಂಡ್ಯ 34, ವಿಲ್ ಜ್ಯಾಕ್ಸ್‌ 33, ರಯಾನ್ ರಿಕೆಲ್ಟನ್‌ 12, ಶಾರ್ದೂಲ್ ಠಾಕೂರ್‌ ಅಜೇಯ 10 ರನ್‌ಗಳ ಕೊಡುಗೆ ನೀಡಿದರು.

ರಾಜಸ್ಥಾನ ಪರ ಜೋಫ್ರಾ ಆರ್ಚರ್‌ 3 ವಿಕೆಟ್‌ ಪಡೆದು ಮಿಂಚಿದರೆ, ನಾಂಡ್ರೆ ಬರ್ಗರ್‌, ಬ್ರಿಜೇಶ್ ಶರ್ಮಾ ಹಾಗೂ ಯಶ್ ಪುಂಜಾ ತಲಾ 2 ವಿಕೆಟ್‌ ಪಡೆದು ಮುಂಬೈ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

ಸಮಗ್ರ ಪ್ರದರ್ಶನದ ಮೂಲಕ ರಾಜಸ್ಥಾನ ರಾಯಲ್ಸ್‌ ಮಹತ್ವದ ಗೆಲುವು ಸಾಧಿಸಿದರೆ, ಮುಂಬೈ ಇಂಡಿಯನ್ಸ್‌ ಪ್ಲೇಆಫ್‌ ಪೈಪೋಟಿಯಲ್ಲಿ ಹಿನ್ನಡೆ ಅನುಭವಿಸಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ