ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 70ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 40 ರನ್‌ಗಳ ಗೆಲುವು ಸಾಧಿಸಿದೆ. ಕೆಎಲ್ ರಾಹುಲ್ ಅವರ ಅರ್ಧಶತಕ ಹಾಗೂ ಬೌಲರ್‌ಗಳ ಸಮರ್ಥ ಪ್ರದರ್ಶನದ ನೆರವಿನಿಂದ ಡೆಲ್ಲಿ ಭರ್ಜರಿ ಜಯ ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ತಂಡದ ಪರ ಕೆಎಲ್ ರಾಹುಲ್ 60 ರನ್‌ಗಳ ಸೊಗಸಾದ ಇನ್ನಿಂಗ್ಸ್ ಆಡಿದರೆ, ಅಕ್ಷರ್ ಪಟೇಲ್ 39 ರನ್, ಡೇವಿಡ್ ಮಿಲ್ಲರ್ 28 ರನ್, ಸಾಹಿಲ್ ಪರಾಖ್ 24 ರನ್ ಹಾಗೂ ಅಭಿಷೇಕ್ ಪೊರೆಲ್ 22 ರನ್ ಗಳಿಸಿದರು. ಅಶುತೋಷ್ ಶರ್ಮಾ 18 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ಟ್ರಿಸ್ಟಾನ್ ಸ್ಟಬ್ಸ್ ಕ್ರೀಸ್‌ನಲ್ಲಿ ಉಳಿದರು.
ಕೋಲ್ಕತ್ತಾ ಪರ ಸೌರಭ್ ದುಬೆ 2 ವಿಕೆಟ್ ಪಡೆದರೆ, ಅನುಕುಲ್ ರಾಯ್, ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಕಬಳಿಸಿದರು.
163 ರನ್‌ಗಳಿಗೆ ಆಲೌಟ್ ಆದ ಕೋಲ್ಕತ್ತಾ
204 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 163 ರನ್‌ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ: IPL: ಮುಂಬೈ ವಿರುದ್ಧ ಗೆದ್ದು ಪ್ಲೇಆಫ್‌ಗೆ ರಾಯಲ್ ಎಂಟ್ರಿ ಕೊಟ್ಟ ರಾಜಸ್ಥಾನ
ತಂಡದ ಪರ ನಾಯಕ ಅಜಿಂಕ್ಯ ರಹಾನೆ 63 ರನ್‌ಗಳ ಹೋರಾಟದ ಇನ್ನಿಂಗ್ಸ್ ಆಡಿದರೆ, ರೋವ್ಮನ್ ಪೊವೆಲ್ 29, ಮನೀಶ್ ಪಾಂಡೆ 25, ಫಿನ್ ಅಲೆನ್ 20 ರನ್ ಗಳಿಸಿದರು. ಆದರೆ, ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು.
ರಿಂಕು ಸಿಂಗ್ ಹಾಗೂ ಕಾರ್ತಿಕ್ ತ್ಯಾಗಿ ಶೂನ್ಯಕ್ಕೆ ರನ್ ಔಟ್ ಆಗಿದ್ದು, ಕ್ಯಾಮೆರಾನ್ ಗ್ರೀನ್ 2, ತೇಜಸ್ವಿ ಸಿಂಗ್ ದನಿಯಾ 1, ಅನುಕುಲ್ ರಾಯ್ 9, ವರುಣ್ ಚಕ್ರವರ್ತಿ 5, ಸೌರಭ್ ದುಬೆ ಅಜೇಯ 4 ರನ್ ಗಳಿಸಿದರು.
ಡೆಲ್ಲಿ ಪರ ಕುಲ್ದೀಪ್ ಯಾದವ್ ಹಾಗೂ ಲುಂಗಿ ಎನ್ಗಿಡಿ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಮಿಚೆಲ್ ಸ್ಟಾರ್ಕ್ 2 ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದು ಕೋಲ್ಕತ್ತಾ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


