ಹೆಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 92 ರನ್‌ಗಳ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಜತ್ ಪಟಿದಾರ್, ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಸಿಡಿಸಿ ಮಿಂಚಿದರು.
ಇನ್ನೂ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ತಲಾ 43 ರನ್‌ಗಳ ಕೊಡುಗೆ ನೀಡಿದರು. ದೇವದತ್ ಪಡಿಕ್ಕಲ್ 30, ವೆಂಕಟೇಶ್ ಅಯ್ಯರ್ 19, ಜಿತೇಶ್ ಶರ್ಮಾ ಅಜೇಯ 15 ಹಾಗೂ ಟಿಮ್ ಡೇವಿಡ್ 4 ರನ್ ಗಳಿಸಿದರು.
ಗುಜರಾತ್ ಪರ ಕಗಿಸೊ ರಬಾಡಾ ಮತ್ತು ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 1 ವಿಕೆಟ್ ಕಬಳಿಸಿದರು.
255 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್, 19.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 162 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ರಾಹುಲ್ ತೆವಟಿಯಾ ಹೋರಾಟದ 68 ರನ್ ಗಳಿಸಿದರು.
ಇದನ್ನೂ ಓದಿ: IPL: ಕೆಕೆಆರ್ ರನ್ ಬೇಟೆಗೆ ಡೆಲ್ಲಿ ಬೌಲರ್‌ಗಳ ತಡೆ; ಕೋಲ್ಕತ್ತಾಗೆ ಸೋಲು
ಜೋಸ್ ಬಟ್ಲರ್ 29, ಸಾಯಿ ಸುದರ್ಶನ್ 14, ಕಗಿಸೊ ರಬಾಡಾ 9, ವಾಷಿಂಗ್ಟನ್ ಸುಂದರ್ 8, ರಶೀದ್ ಖಾನ್ 8, ಪ್ರಸಿದ್ಧ್ ಕೃಷ್ಣ 6, ನಿಶಾಂತ್ ಸಿಂಧು 5, ಶುಭ್ಮನ್ ಗಿಲ್ 2 ರನ್ ಗಳಿಸಿದರು. ಜೇಸನ್ ಹೋಲ್ಡರ್ ಶೂನ್ಯಕ್ಕೆ ಔಟಾದರು.
ಆರ್‌ಸಿಬಿ ಪರ ಜಾಕೋಬ್ ಡಫಿ 3 ವಿಕೆಟ್ ಪಡೆದು ಮಿಂಚಿದರೆ, ರಸಿಕ್ ಸಲಾಂ, ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಕಬಳಿಸಿದರು. ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


