Breaking News

Bantwal : ಕಲ್ಲಡ್ಕ ಶ್ರೀರಾಮ ಪ.ಪೂ. ಕಾಲೇಜಿನಲ್ಲಿ ವಿವೇಕ ಜಯಂತಿ ಕಾರ್ಯಕ್ರಮ

ವಿವೇಕ ಜಯಂತಿ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿವೇಕ ಜಯಂತಿ 2026 ರ ಕಾರ್ಯಕ್ರಮವನ್ನು, ಜ.12 ರಂದು ಅಜಿತ ಕುಮಾರ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ, ದೇಶಭಕ್ತಿ ಗಾಯನದ ಮೂಲಕ ಚಾಲನೆ ನೀಡಲಾಯಿತು.

ಇದನ್ನೂ ಓದಿ : ಕಡಬ: ಮನೆಯಂಗಳದಲ್ಲಿ  ಚಿರತೆಯ ಓಡಾಟ ಸಿಸಿಟಿವಿಯಲ್ಲಿ ಸೆರೆ

Advertisement

ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಮಂಗಳೂರಿನ ನಾರಾಯಣಗುರು ಪದವಿ ಪೂರ್ವ ಕಾಲೇಜಿನ, ಮಂಗಳೂರು ವಿಭಾಗದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕನ್ನಡ ಉಪನ್ಯಾಸಕರು ಕೇಶವ ಬಂಗೇರ ಮಾತನಾಡಿ, ಹಿಂದುತ್ವದ ವಿಚಾರವನ್ನು ಜಗತ್ತಿಗೆ ಪಸರಿಸಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ನಮ್ಮಲ್ಲಿರುವ ಒಳ್ಳೆಯ ವಿಚಾರಗಳು, ನಮ್ಮ ಜೀವನ, ನಮ್ಮಲ್ಲಿರುವ ನ್ಯೂನತೆಗಳು ನಮ್ಮ ಅಂತ್ಯ ಎಂದು ಜಗತ್ತಿಗೆ ತಿಳಿಸಿದವರು ಸ್ವಾಮಿ ವಿವೇಕಾನಂದರು ಎಂದು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿದರು.

ವೇದಿಕೆಯಲ್ಲಿ ವಸಂತ ಬಲ್ಲಾಳ್ ಪ್ರಾಚಾರ್ಯರು ಶ್ರೀರಾಮ ಪದವಿ ಪೂರ್ವ ಕಾಲೇಜು, ರೇಖಾ ಶರ್ಮಾ ಮಾತೃ ಭಾರತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಂದೇ ಮಾತರಂ ಗೀತೆಯ ಮೂಲಕ ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮವನ್ನು ಉಪನ್ಯಾಸಕ ರಮೇಶ್ ನಿರ್ವಹಿಸಿದರು.

ಇದನ್ನೂ ಓದಿ : Reliance : ಭಾರತದಲ್ಲಿನ ರಿಲಯನ್ಸ್ ಇಂಡಸ್ಟ್ರೀಸ್ ಬ್ಯಾಟರಿ ಸೆಲ್ ಉತ್ಪಾದನಾ ಯೋಜನೆ ತಾತ್ಕಾಲಿಕ ಸ್ಥಗಿತ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು