ಗ್ರಾಹಕರಿಗೆ ನಿರಾಳ ತಂದ ವಾರದ ಆರಂಭ!: ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ; ಸ್ಥಿರತೆ ಕಾಯ್ದುಕೊಂಡ ಬೆಳ್ಳಿ ದರ!

ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರದಂದು ಹಳದಿ ಲೋಹದ ಖರೀದಿದಾರರಿಗೆ ಉತ್ತಮ ಸುದ್ದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಗ್ರಾಮ್‌ಗೆ ಭರ್ಜರಿ 75 ರೂಪಾಯಿ ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇವತ್ತೂ ಯಾವುದೇ ಬದಲಾವಣೆ ಆಗದೆ ದರ ಸ್ಥಿರವಾಗಿದೆ.

ಆಭರಣ ಚಿನ್ನದ ದರ ವಿವರ:

ಸಾಮಾನ್ಯವಾಗಿ ಸಾರ್ವಜನಿಕರು ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ನಿನ್ನೆವರೆಗೆ ಗ್ರಾಮ್‌ಗೆ 14,395 ರೂ. ಇದ್ದ ಆಭರಣ ಚಿನ್ನದ ಬೆಲೆ, ಇಂದು 75 ರೂ. ಇಳಿಕೆಯಾಗುವುದರೊಂದಿಗೆ 14,320 ರೂ.ಗೆ ತಲುಪಿದೆ.

ಅಪರಂಜಿ ಚಿನ್ನದ ದರ ವಿವರ:

ಇನ್ನು ಹೂಡಿಕೆದಾರರು ಹೆಚ್ಚಾಗಿ ಇಷ್ಟಪಡುವ 24 ಕ್ಯಾರೆಟ್‌ನ ಅತ್ಯಂತ ಶುದ್ಧವಾದ ಅಪರಂಜಿ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ಗ್ರಾಮ್‌ಗೆ 15,622 ರೂ. ಆಗಿದೆ.

ಇದನ್ನೂ ಓದಿ:ಮಂಗಳೂರು: 2 ಕೋಟಿ ಭೂಮಿಗಾಗಿ ಉದ್ಯಮಿಯ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಸ್ಥಿರ:

ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆ ಮಾತ್ರ ಯಾವುದೇ ಏರಿಳಿತ ಕಾಣದೆ ಹಳೆಯ ದರದಲ್ಲೇ ಮುಂದುವರಿದಿದೆ.

ಬೆಂಗಳೂರು ಹಾಗೂ ಮುಂಬೈ: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಇಂದು ಗ್ರಾಮ್‌ಗೆ 280 ರೂ. ನಂತೆ ಮಾರಾಟವಾಗುತ್ತಿದೆ.

ಚೆನ್ನೈ: ತಮಿಳುನಾಡಿನ ಚೆನ್ನೈ ಮೊದಲಾದೆಡೆ ಇಂದಿನ ಬೆಳ್ಳಿ ದರ ಗ್ರಾಮ್‌ಗೆ 290 ರೂ. ಗಳಷ್ಟಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು