ಮಂಗಳೂರು: 2 ಕೋಟಿ ಭೂಮಿಗಾಗಿ ಉದ್ಯಮಿಯ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ

ಮಂಗಳೂರು: ನಗರದಲ್ಲಿ ಭೂಮಿ ವ್ಯವಹಾರದ ವಿಚಾರವಾಗಿ ಉದ್ಯಮಿಯೊಬ್ಬರ ಮೇಲೆ ನಡೆದ ಭೀಕರ ದಾಳಿಯ ದೃಶ್ಯ ಈಗ ಹೊರಬಿದ್ದಿದೆ. 2 ಕೋಟಿ ರೂಪಾಯಿ ಮೌಲ್ಯದ ಭೂ ವ್ಯವಹಾರದಲ್ಲಿ ಉಂಟಾದ ಗಲಾಟೆ ಕೊಲೆ ಪ್ರಯತ್ನಕ್ಕೆ ಕಾರಣವಾಗಿದೆ.ಉದ್ಯಮಿ ಮೋಹನ್ ದಾಸ್ ಶೆಟ್ಟಿ ಅವರು ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ, ಆರೋಪಿ ಮೊಹಮ್ಮದ್ ಶರೀಫ್ ತನ್ನ ಕಾರಿನಿಂದ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ.

ಡಿಕ್ಕಿ ಹೊಡೆದ ನಂತರ ಕಾರನ್ನು ನಿಲ್ಲಿಸಿದ ಶರೀಫ್, ಇದೊಂದು ಆಕಸ್ಮಿಕ ಅಪಘಾತ ಎನ್ನುವಂತೆ ನಾಟಕವಾಡಿದ್ದಾನೆ. ಆದರೆ, ತನಿಖೆಯ ವೇಳೆ ಇದು ಪೂರ್ವನಿಯೋಜಿತ ಕೊಲೆ ಯತ್ನ ಎಂಬುದು ತಿಳಿದುಬಂದಿದೆ. ಮೋಹನ್ ದಾಸ್ ಶೆಟ್ಟಿ ಮತ್ತು ಮೊಹಮ್ಮದ್ ಶರೀಫ್ ನಡುವೆ 2 ಕೋಟಿ ರೂಪಾಯಿ ಮೌಲ್ಯದ ಜಮೀನು ಒಪ್ಪಂದಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದವಿತ್ತು. ಇದೇ ಕಾರಣಕ್ಕೆ ಶರೀಫ್ ಈ ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: ʼಸಮುದಾಯ ಸೇವೆʼ ಶಿಕ್ಷೆಗೆ ಗುರಿಯಾಗಿದ್ದ ಯುವಕ ಆತ್ಮಹತ್ಯೆಗೆ ಯತ್ನ

ಇಲ್ಲಿದೆ ನೋಡಿ ವಿಡಿಯೋ:

ಗಂಭೀರವಾಗಿ ಗಾಯಗೊಂಡಿರುವ ಮೋಹನ್ ದಾಸ್ ಶೆಟ್ಟಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಂಗಳೂರು ಪೊಲೀಸರು ತನಿಖೆ ನಡೆಸಿ, ಆರೋಪಿ ಮೊಹಮ್ಮದ್ ಶರೀಫ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು