“ನಾವೆಲ್ಲ ಕಳ್ ನನ್ ಮಕ್ಳಾ? ಅವಳದ್ದೇ 18 ನಿಮಿಷದ ವಿಡಿಯೋ ಬಂದಿಲ್ವಾ?”: ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸೋನು ಗೌಡ

ಬೆಂಗಳೂರು: ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ವಿರುದ್ಧ ಈಗ ಪುರುಷ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಹುಡುಗರೆಲ್ಲಾ ಕಳ್ ನನ್ನ ಮಕ್ಕಳು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸೋನು ಗೌಡ ವಿರುದ್ಧ ಇದೀಗ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ. ಮುರಳಿ ಎಂಬುವವರ ನೇತೃತ್ವದಲ್ಲಿ ಯುವಕರ ತಂಡವೊಂದು ಸೋನು ಗೌಡ ವಿರುದ್ಧ ಕಾನೂನು ಸಮರ ಸಾರಿದ್ದು, ಆಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ. ಇದರ ಬೆನ್ನಲ್ಲೇ ಸೋನು ಗೌಡ ವಿಚಾರಣೆಗೆ ಹೋಗಿದ್ದಾರೆ.  ‘ಮೋಸ ಮಾಡುವ ಹುಡುಗರ ಬಗ್ಗೆ’ ನಾನು ತಮಾಷೆಯಾಗಿ ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡು ನನ್ನ ಮೇಲೆ ದಾಳಿ ಮಾಡಲಾಗುತ್ತಿದೆ. ಆದರೆ ನಾನು ಇದಕ್ಕೆಲ್ಲ ಹೆದರುವಳಲ್ಲ. ನಾನು ತಪ್ಪಾಗಿ ಹೇಳಿಲ್ಲ ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಏನೇ ಆಗಲಿ ನಾನು ಕ್ಷಮೆ ಕೇಳುವುದಿಲ್ಲ’ ಎಂದಿದ್ದಾರೆ

ಫಿಲಂ ಚೇಂಬರ್‌ನಿಂದ ಕಲಾವಿದರ ಸಂಘಕ್ಕೆ ರೆಫರ್:

Advertisement

ಸೋನು ಗೌಡ ಅವರ ವಿವಾದಾತ್ಮಕ ಹೇಳಿಕೆ ಖಂಡಿಸಿ ಮುರಳಿ ಮತ್ತು ತಂಡದವರು ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲಂ ಚೇಂಬರ್) ಮೆಟ್ಟಿಲೇರಿದ್ದರು. ಆದರೆ, ಫಿಲಂ ಚೇಂಬರ್ ಈ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದು, ಇದನ್ನು ಚಿತ್ರ ಕಲಾವಿದರ ಸಂಘಕ್ಕೆ ನೀಡುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ತಡಮಾಡದ ಮುರಳಿ ಅಂಡ್ ಟೀಮ್, ನೇರವಾಗಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ನೀಡಿದ್ದಾರೆ.

ವಿವಾದಕ್ಕೆ ಕಾರಣವಾದ ಸೋನು ಗೌಡ ಹೇಳಿಕೆ ಏನು?

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ, “ಹುಡುಗಿಯರಿಗೆ ಮೋಸ ಮಾಡುವ ಹುಡುಗರಿಗೆ ನೀವು ಏನ್ ಹೇಳ್ತೀರಾ?” ಎಂಬ ಪ್ರಶ್ನೆಗೆ ಉತ್ತರಿಸಿದ್ದ ಸೋನು ಶ್ರೀನಿವಾಸ್ ಗೌಡ, “ಹುಡುಗರೆಲ್ಲಾ ಕಳ್ ನನ್ನ ಮಕ್ಕಳು” ಎಂಬ ಉಡಾಫೆಯ ಮಾತುಗಳನ್ನಾಡಿದ್ದರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಡೀ ಪುರುಷ ಸಮುದಾಯ ಸೋನು ವಿರುದ್ಧ ಕೆರಳಿ ಕೆಂಡವಾಗಿದೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಸೋನು ಗೌಡ ಗ್ರ್ಯಾಂಡ್ ಎಂಟ್ರಿ!: ಹುಟ್ಟುಹಬ್ಬದ ದಿನವೇ ‘ಕೇಕೆ’ ಚಿತ್ರದ ಮಾದಕ ಐಟಂ ಸಾಂಗ್‌ನಲ್ಲಿ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ರೀಲ್ಸ್ ರಾಣಿ

“ನಮ್ಮ ಅಪ್ಪನ ಮೇಲೆ ನಮಗೆ ನಂಬಿಕೆ ಇದೆ”: ಮುರಳಿ ಆಕ್ರೋಶ

ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುರಳಿ ಭಾರಿ ಆಕ್ರೋಶ ಹೊರಹಾಕಿದ್ದಾರೆ. “ಸೋನು ಗೌಡ ಇಡೀ ಪುರುಷ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಲೇಬೇಕು. ನಾವೆಲ್ಲಾ ಕಳ್ ನನ್ನ ಮಕ್ಕಳು ಅಂದ್ರೆ ನಾವೇನು ಅವಳ ಮಕ್ಕಳಾ? ನಮ್ಮ ಹೆತ್ತ ಅಪ್ಪನ ಬಗ್ಗೆ ನಮಗೆ ನಂಬಿಕೆ ಇದೆ, ನಾವು ಕಳ್ಳರಲ್ಲ. ಈ ಹಿಂದೆ ಅವಳದ್ದೇ 18 ನಿಮಿಷದ ವಿಡಿಯೋ ಒಂದು ವೈರಲ್ ಆಗಿತ್ತಲ್ಲ, ಅದನ್ನು ಯಾರು ಮಾಡಿದ್ರೋ ಅವರಿಗೆ ಅವಳು ಬೈಯಬೇಕಿತ್ತೇ ಹೊರತು ಇಡೀ ಪ್ರಪಂಚದ ಗಂಡಸರನ್ನಲ್ಲ. ನಾವು ಬಿಡಲ್ಲ, ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ” ಎಂದು ಎಚ್ಚರಿಕೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *