ಮುಂಬೈ: ಬಾಲಿವುಡ್‌ನ ‘ಡ್ರಾಮಾ ಕ್ವೀನ್’ ಎಂದೇ ಖ್ಯಾತರಾಗಿರುವ ನಟಿ ರಾಖಿ ಸಾವಂತ್ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಯಾವುದೇ ವಿಷಯದ ಬಗ್ಗೆ ಅವರು ಯಾವಾಗ, ಯಾವ ರೀತಿಯ ಹೇಳಿಕೆ ನೀಡುತ್ತಾರೆ ಎಂದು ಊಹಿಸುವುದು ಅಸಾಧ್ಯ! ಅವರ ವಿಲಕ್ಷಣ ಫ್ಯಾಷನ್ ಸೆನ್ಸ್, ವಿಚಿತ್ರ ಬಟ್ಟೆಗಳು ಹಾಗೂ ವಿವಾದಾತ್ಮಕ ಮಾತುಗಳು ಸದಾ ಚರ್ಚೆಯ ವಿಷಯವಾಗಿರುತ್ತವೆ. ಇಲ್ಲಿಯವರೆಗೆ ಹಲವು ಸೂಪರ್ ಹಿಟ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸದ್ದು ಮಾಡಿರುವ ರಾಖಿ ಸಾವಂತ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅನುಯಾಯಿಗಳಿದ್ದಾರೆ.
ಈ ಮಧ್ಯೆ, ನಟಿ ರಾಖಿ ಸಾವಂತ್ ಅವರು ಬಾಲಿವುಡ್‌ನ ಹಿರಿಯ ನಟ ಆಮಿರ್ ಖಾನ್ ಮತ್ತು ಅವರ ಮದುವೆಯ ಬಗ್ಗೆ ನೀಡಿರುವ ಅನಿರೀಕ್ಷಿತ ಹೇಳಿಕೆಯೊಂದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಾಖಿ ನೀಡಿದ ಈ ವಿಲಕ್ಷಣ ಹೇಳಿಕೆಯಿಂದಾಗಿ ನೆಟ್ಟಿಗರು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ.

ಆಮಿರ್ ಖಾನ್ ಮದುವೆ ಬಗ್ಗೆ ರಾಖಿ ಹೇಳಿದ್ದೇನು?:
ಆಮಿರ್ ಖಾನ್ ಅವರ ಮದುವೆಗೆ ಪ್ರತಿಕ್ರಿಯಿಸಿದ್ದಾರೆ. ‘ಆಮಿರ್ ಮೂರನೇ ಬಾರಿಗೆ ಮದುವೆಯಾಗಲಿದ್ದಾರೆ. ಅವರು ಮತ್ತೆ ಮದುವೆಯಾಗಲು ಬಯಸಿದರೆ, ನಾನು ಅದಕ್ಕೆ ಸಿದ್ಧ. ನಾನು ಇಸ್ಲಾಂ ಅನ್ನು ಸಹ ಸ್ವೀಕರಿಸುತ್ತೇನೆ’ ಎಂದು ರಾಖಿ ಹೇಳಿದ್ದಾರೆ.
ಮೂಲಗಳ ಪ್ರಕಾರ, ಇತ್ತೀಚಿನ ಮಾಧ್ಯಮ ಸಂವಾದವೊಂದರಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಅವರ ವೈವಾಹಿಕ ಜೀವನ ಹಾಗೂ ಮದುವೆಯ ವಿಷಯ ಪ್ರಸ್ತಾಪವಾದಾಗ ರಾಖಿ ಸಾವಂತ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದರು. ಆಮಿರ್ ಖಾನ್ ಅವರ ಮದುವೆಗೆ ಸಂಬಂಧಿಸಿದಂತೆ ರಾಖಿ ನೀಡಿದ ಅತಿರೇಕದ ಮತ್ತು ಅಸಂಬದ್ಧ ಮಾತುಗಳು ಆಮಿರ್ ಖಾನ್ ಅಭಿಮಾನಿಗಳನ್ನು ಕೆರಳಿಸಿದೆ. “ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ರಾಖಿ ಸಾವಂತ್ ಯಾರು?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್!:
ರಾಖಿ ಸಾವಂತ್ ಅವರ ಈ ಹೇಳಿಕೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಕಾಮೆಂಟ್ ಸೆಕ್ಷನ್‌ಗಳಲ್ಲಿ ಟ್ರೋಲ್‌ಗಳ ಸುರಿಮಳೆಯೇ ಆಗುತ್ತಿದೆ. “ಕೇವಲ ಪಬ್ಲಿಸಿಟಿ (ಪ್ರಚಾರ) ಗಿಮಿಕ್‌ಗಾಗಿ ರಾಖಿ ಯಾವಾಗಲೂ ದೊಡ್ಡ ನಟರ ಹೆಸರುಗಳನ್ನು ಬಳಸಿಕೊಳ್ಳುತ್ತಾರೆ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, “ರಾಖಿ ಅವರ ಡ್ರಾಮಾಗಳಿಗೆ ಯಾವುದೇ ಮಿತಿ ಇಲ್ಲದಂತಾಗಿದೆ, ಅವರ ಫ್ಯಾಷನ್ ತರಹ ಅವರ ಮಾತುಗಳೂ ವಿಚಿತ್ರ” ಎಂದು ತಮಾಷೆ ಮಾಡುತ್ತಿದ್ದಾರೆ. ಸದ್ಯ ಬಿಟೌನ್ ಅಂಗಳದಲ್ಲಿ ರಾಖಿ ಸಾವಂತ್ ಅವರ ಈ ಹೊಸ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

