Breaking News

ಸ್ಯಾಂಡಲ್‌ವುಡ್‌ಗೆ ಸೋನು ಗೌಡ ಗ್ರ್ಯಾಂಡ್ ಎಂಟ್ರಿ!: ಹುಟ್ಟುಹಬ್ಬದ ದಿನವೇ ‘ಕೇಕೆ’ ಚಿತ್ರದ ಮಾದಕ ಐಟಂ ಸಾಂಗ್‌ನಲ್ಲಿ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ರೀಲ್ಸ್ ರಾಣಿ

ಬೆಂಗಳೂರು: ಸದಾ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಿದ್ದ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ (Sonu Srinivas Gowda) ಈಗ ಅಧಿಕೃತವಾಗಿ ಬೆಳ್ಳಿಪರದೆಗೆ ಲಗ್ಗೆ ಇಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಅವರು, ಮೊದಲ ಸಿನಿಮಾದಲ್ಲಿಯೇ ಭರ್ಜರಿ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕುವ ಮೂಲಕ ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಸೋನು ಗೌಡ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹಲವರು ಭಾವಿಸಿದ್ದರು. ಆದರೆ ಅವರು ಸದ್ದಿಲ್ಲದೆ ಸೆಟ್ಟೇರಿ, ಈಗ ಬಿಡುಗಡೆಗೆ ಸಜ್ಜಾಗಿರುವ ನೂತನ ಚಿತ್ರ ‘ಕೇಕೆ’ (Keke) ಮೂಲಕ ಅದ್ಧೂರಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಬರುವ ವಿಶೇಷ ಐಟಂ ಸಾಂಗ್ ಒಂದರಲ್ಲಿ ಸೋನು ಗೌಡ ಮೈಚಳಿ ಬಿಟ್ಟು ಅತ್ಯಂತ ಮಾದಕ ಹಾಗೂ ಗ್ಲಾಮರಸ್ ಆಗಿ ನರ್ತಿಸಿದ್ದಾರೆ.

ಇದನ್ನೂ ಓದಿ;ಸಮಂತಾ ತಾಯಿ ಆಗ್ತಿರೋದು ಸತ್ಯ ಎಂದ ನಿರ್ದೇಶಕಿ ನಂದಿನಿ ರೆಡ್ಡಿ!; ಸಿನಿಮಾ ಸಕ್ಸಸ್ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ನಟಿ

ಸೋನು ಗೌಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಈ ಮಸಾಲಾ ಐಟಂ ಹಾಡನ್ನು ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ‘ಕನ್ನಡ ಚಲನಚಿತ್ರ ಕಲಾವಿದರ ಸಂಘ’ದ ಆವರಣದಲ್ಲಿ ಚಿತ್ರತಂಡ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನು ಗೌಡ, “ನನ್ನ ಹುಟ್ಟುಹಬ್ಬದ ದಿನವೇ ಈ ಹಾಡು ಬಿಡುಗಡೆಯಾಗುತ್ತಿರುವುದು ಮತ್ತು ಇದರ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವುದು ನನಗೆ ಸಿಕ್ಕ ದೊಡ್ಡ ಬರ್ತ್‌ಡೇ ಗಿಫ್ಟ್” ಎಂದು ಸಂತಸ ಹಂಚಿಕೊಂಡಿದ್ದಾರೆ. ಇಂಟರ್ನೆಟ್‌ನಲ್ಲಿ ಈ ಹಾಡಿನ ಪ್ರೋಮೋ ಸದ್ಯ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *