ವೇದಿಕೆಗೆ ನುಗ್ಗಿದ ರಾಮ್ ಚರಣ್ ಅಭಿಮಾನಿ; ಬೆಚ್ಚಿಬಿದ್ದ ನಟಿ ಜಾನ್ವಿ ಕಪೂರ್, ಬಾಡಿಗಾರ್ಡ್ ಕೆವಿನ್ ಭರ್ಜರಿ ಆ್ಯಕ್ಷನ್!

ವಿಜಯವಾಡ: ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’ (Peddi) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾ ಆಧಾರಿತ ಆ್ಯಕ್ಷನ್ ಡ್ರಾಮಾ ಸಿನಿಮಾದ ಭರ್ಜರಿ ಪ್ರಚಾರಕ್ಕಾಗಿ ಚಿತ್ರತಂಡ ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಮೆಗಾ ಈವೆಂಟ್ ಒಂದನ್ನು ಆಯೋಜಿಸಿತ್ತು. ಆದರೆ, ಈ ಕಾರ್ಯಕ್ರಮದ ನಡುವೆ ನಡೆದ ಅನಿರೀಕ್ಷಿತ ಘಟನೆಯೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದಾಗ, ವೇದಿಕೆಯ ಮೇಲೆ ನಟ ರಾಮ್ ಚರಣ್, ನಟಿ ಜಾನ್ವಿ ಕಪೂರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಉಪಸ್ಥಿತರಿದ್ದರು. ಈ ವೇಳೆ ಸಾರ್ವಜನಿಕರ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬ, ಅಲ್ಲಿದ್ದ ಕಟ್ಟುನಿಟ್ಟಿನ ಭದ್ರತಾ ವಲಯವನ್ನುದಾಟಿ ಒಮ್ಮೆಗೆ ವೇದಿಕೆಯತ್ತ ನುಗ್ಗಿದ್ದಾನೆ. ವಿಶೇಷವೆಂದರೆ, ಈ ಅಭಿಮಾನಿ ನೋಡಲು ಮತ್ತು ಹೇರ್‌ಸ್ಟೈಲ್‌ನಲ್ಲಿ ಇಂಟರ್ನ್ಯಾಷನಲ್ ಸ್ಟಾರ್ ರಾಮ್ ಚರಣ್ ಅವರಂತೆಯೇ ಕಾಣಿಸುತ್ತಿದ್ದ. ಆತ ನೇರವಾಗಿ ನಟನ ಬಳಿಗೆ ಓಡಿ ಬಂದಿದ್ದಾನೆ.

ಇಲ್ಲಿದೆ ನೋಡಿ ವಿಡಿಯೋ

ಅಭಿಮಾನಿ ವೇದಿಕೆಗೆ ಅತಿ ವೇಗವಾಗಿ ನುಗ್ಗಿದ ರಭಸಕ್ಕೆ, ರಾಮ್ ಚರಣ್ ಪಕ್ಕದಲ್ಲೇ ಕುಳಿತಿದ್ದ ನಟಿ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ. ಹಠಾತ್ ಬೆಳವಣಿಗೆಯಿಂದ ಅವರ ಮುಖದಲ್ಲಿ ಅಸಹಜತೆ ಮತ್ತು ಭಯ ಎದ್ದು ಕಾಣುತ್ತಿತ್ತು. ಈ ಘಟನೆಯಿಂದಾಗಿ ಇಡೀ ಸಭಾಂಗಣದಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಒಂದು ಕಾಲದ ಸ್ಟಾರ್ ನಟಿ ಇಂದು ಬೀದಿಪಾಲು!; ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಸಿಕ್ಕಿಬಿದ್ದ ಮಿತಾಲಿ ಶರ್ಮ

ಪರಿಸ್ಥಿತಿ ಕೈಮೀರುವ ಮುನ್ನವೇ ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಹಾಗೂ ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್, ಅಂತರಾಷ್ಟ್ರೀಯ ಎಂಎಂಎ ಫೈಟರ್ (MMA Fighter) ಆಗಿರುವ ಕೆವಿನ್ ಕುಂಟ (Kevin Kunda), ಆ ಅಭಿಮಾನಿಯನ್ನು ಕ್ಷಣಾರ್ಧದಲ್ಲಿ ಹಿಡಿದು ವೇದಿಕೆಯಿಂದ ಹಿಂದಕ್ಕೆ ಎಳೆದಿದ್ದಾರೆ. ಕೆವಿನ್ ಅವರ ಈ ಸಮಯಪ್ರಜ್ಞೆ ಮತ್ತು ಬಲಿಷ್ಠ ಸಾಹಸಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ಇಡೀ ಹೈಡ್ರಾಮಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು