ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಅಧಿಕೃತಗೊಳ್ಳುತ್ತಿದ್ದಂತೆಯೇ, ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ (U. T. Khader) ಅವರು ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಸಚಿವ ಸ್ಥಾನದ ಪ್ರಮಾಣವಚನಕ್ಕೆ ಅಧಿಕೃತ ಕರೆ ಬಂದ ಬೆನ್ನಲ್ಲೇ ಈ ಮಹತ್ವದ ರಾಜಕೀಯ ವಿದ್ಯಮಾನ ನಡೆದಿದೆ.
ಲೋಕಭವನದಲ್ಲಿಯೇ ಉಪಸಭಾಪತಿಗಳಿಗೆ ಯು.ಟಿ. ಖಾದರ್ ಅವರು ತಮ್ಮ ಸಭಾಪತಿ ಸ್ಥಾನದ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಶಾಸಕಾಂಗದ ಅತ್ಯುನ್ನತ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದ ಖಾದರ್, ಈಗ ಮರಳಿ ಸಕ್ರಿಯ ಆಡಳಿತದ ಮುಖ್ಯವಾಹಿನಿಗೆ (ಸಚಿವ ಸಂಪುಟಕ್ಕೆ) ಪ್ರವೇಶ ಪಡೆಯುತ್ತಿರುವುದು ಕರಾವಳಿ ಭಾಗದ ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಕೊನೆಗೂ ಹೈಕಮಾಂಡ್‌ನಿಂದ ‘ಒನ್ ಆಂಡ್ ಓನ್ಲಿ’ ಡಿಸಿಎಂ ಫಿಕ್ಸ್!: ಡಾ. ಜಿ. ಪರಮೇಶ್ವರ್ ರಾಜ್ಯದ ಏಕೈಕ ಉಪಮುಖ್ಯಮಂತ್ರಿ
ರಾಜೀನಾಮೆ ಸಲ್ಲಿಕೆಯ ಬಳಿಕ ಸಚಿವ ಸ್ಥಾನದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯು.ಟಿ. ಖಾದರ್, “ನಾನು ಹೈಕಮಾಂಡ್ ಅಥವಾ ಸಿಎಂ ಮುಂದೆ ಯಾವುದೇ ನಿರ್ದಿಷ್ಟ ಖಾತೆಗೆ ಬೇಡಿಕೆ ಇಟ್ಟಿಲ್ಲ. ಆದರೆ, ಈ ಹಿಂದೆ ನಿಭಾಯಿಸಿರುವ ಅನುಭವ ಇರುವುದರಿಂದ ಆರೋಗ್ಯ ಖಾತೆ ಅಥವಾ ವಸತಿ ಖಾತೆ ಸಿಕ್ಕರೆ ಒಳಿತೆಂಬ ಸಣ್ಣ ಬಯಕೆ ಇದೆ. ನಾಯಕರು ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಒಂದು ವೇಳೆ ಹೈಕಮಾಂಡ್ ಉಪಮುಖ್ಯಮಂತ್ರಿ ಸ್ಥಾನ ನೀಡಿದರೂ ನಾನು ಸಿದ್ಧನಿದ್ದೇನೆ. ರಾಜಕೀಯ ಪಿಚ್‌ನಲ್ಲಿ ಯಾವ ಬಾಲ್ ಬಂದರೂ ಬ್ಯಾಟಿಂಗ್ ಮಾಡಲು ನಾನು ರೆಡಿ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


