ಸುಳ್ಯ: ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆಯಲ್ಲಿ ಗಾಂಧಿ ವೇಷಧಾರಿಯಾಗಿ ಗಮನ ಸೆಳೆದ ಎಎಪಿ ಕಾರ್ಯಕರ್ತ

ಸುಳ್ಯ: ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆಯಲ್ಲಿ ಎಎಪಿ ಕಾರ್ಯಕರ್ತರೊಬ್ಬರು ಗಾಂಧಿ ವೇಷಧಾರಿಯಾಗಿ ಗಮನ ಸೆಳೆದರು.

ಕೇಂದ್ರ ಸರಕಾರವು ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮತ್ತು ನಿಯಮಗಳನ್ನು ಬದಲಾವಣೆ ಮಾಡಿರುವುದನ್ನು ಪ್ರತಿಭಟಿಸಿ ದ.ಕ.ಜಿಲ್ಲಾ ಕಾಂಗ್ರೆಸ್‌ನ ನೇತೃತ್ವದಲ್ಲಿ 4 ದಿನಗಳ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆ ಆಯೋಜಿಸಿದ್ದು, ಇಂದು ಸುಳ್ಯದಿಂದ ಆರಂಭಗೊಂಡಿತು.

ಇದನ್ನೂ ಓದಿ: ಕಾಂಗ್ರೆಸ್​​ ವಿರುದ್ಧ ಪ್ರತಿಭಟನೆ: ಸಂಸದ ತೇಜಸ್ವಿ ಸೂರ್ಯ ಪೊಲೀಸ್​​ ವಶಕ್ಕೆ

ಫೆ. ೧೨ ರಂದು ಮುಲ್ಕಿಯಲ್ಲಿ ಸಮಾಪನಗೊಳ್ಳಲಿರುವ ಈ ಪಾದಯಾತ್ರೆಗೆ ಸುಳ್ಯದ ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಮಾಜಿ ಸಚಿವ ಹಾಗೂ ಮಾಜಿಸ ಸಂಸದ ಜಯಪ್ರಕಾಶ್ ಹೆಗ್ಡೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ವೇದಿಕೆ ಮತ್ತು ಪಾದಯಾತ್ರೆಯಲ್ಲಿ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತರಾಗಿದ್ದ ಬೀರಮಂಗಲದ ರಾಮಕೃಷ್ಣರು ಮಹಾತ್ಮಾಗಾಂಧಿಯಂತೆ ವೇಷ ತೊಟ್ಟು ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.

ಬಿಳಿಕಚ್ಚೆ ಕಟ್ಟಿ, ಬಿಳಿ ಶಲ್ಯವೊಂದನ್ನು ಕಟ್ಟಿಕೊಂಡು, ಕೈಯಲ್ಲಿ ಗಾಂಧಿ ಬೆತ್ತ ಹಿಡಿದು ಕನ್ನಡಕ ಧರಿಸಿ ಭಾಗವಹಿಸಿದ ರಾಮಕೃಷ್ಣರು ಗಾಂಧೀಜಿಯವರಂತೆಯೇ ಕಾಣುತ್ತಿದ್ದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು