ಚೆನ್ನೈ : ನಟ ಹಾಗೂ ರಾಜಕಾರಣಿ ‘ದಳಪತಿ’ ವಿಜಯ್ ಅವರ ವೈವಾಹಿಕ ಜೀವನದಲ್ಲಿದ್ದ ಬಿಕ್ಕಟ್ಟು ಕೊನೆಗೂ ಶಮನಗೊಂಡಿದ್ದು, ವಿಚ್ಛೇದನಕ್ಕಾಗಿ (Divorce) ಸಲ್ಲಿಸಿದ್ದ ಅರ್ಜಿಯನ್ನು ಅವರ ಪತ್ನಿ ಸಂಗೀತಾ ವಿಜಯ್ ವಾಪಸ್ ಪಡೆದುಕೊಂಡಿದ್ದಾರೆ. ಈ ಮೂಲಕ ದಳಪತಿ ವಿಜಯ್ ಹಾಗೂ ಸಂಗೀತಾ ದಾಂಪತ್ಯ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಂತಾಗಿದೆ.
ವಿಚ್ಛೇದನ ಕೋರಿ ಸಂಗೀತಾ ಅವರು ಚೆಂಗಲ್ಪಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇತ್ತೀಚೆಗೆ ಏಪ್ರಿಲ್ 20 ಮತ್ತು ಜೂನ್ 15 ರಂದು ನಡೆದ ಕೋರ್ಟ್ ವಿಚಾರಣೆಗೆ ವಿಜಯ್ ಹಾಗೂ ಸಂಗೀತಾ ಇಬ್ಬರೂ ಹಾಜರಾಗಿರಲಿಲ್ಲ. ಇದೀಗ ಸಂಗೀತಾ ಅವರು ತಮ್ಮ ಕೇಸ್ ಹಿಂಪಡೆದುಕೊಂಡಿರುವುದರಿಂದ ದಂಪತಿ ಮತ್ತೆ ಒಂದಾಗಿದ್ದಾರೆ.
ಪುತ್ರ ಜೇಸನ್ ಸಂಜಯ್ ಹಾಗೂ ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪತ್ನಿ ಸಂಗೀತಾ ಅವರು ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಅರ್ಜಿಯನ್ನು ಹಿಂಪಡೆದಿದ್ದಾರೆ ಎನ್ನಲಾಗಿದೆ. ಕಳೆದ ಡಿಸೆಂಬರ್ 23 ರಂದು ಸಂಗೀತಾ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ರಣಬಾಳಿ ಅಥವಾ ಮೈಸಾ ಶೂಟಿಂಗ್ ವಿಳಂಬ
ವಿಜಯ್ ಅವರ ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಬಂದಿದ್ದ ಈ ಸಂಕಷ್ಟ ಕೊನೆಗೂ ತಿಳಿಯಾಗಿದ್ದು, ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಹರ್ಷ ಮೂಡಿಸಿದೆ.

