ಚೆನ್ನೈ: ಟಿ-20 ವಿಶ್ವಕಪ್‌ನಲ್ಲಿ ಭರವಸೆ ಮೂಡಿಸಿದ್ದ ಅಫ್ಘಾನಿಸ್ತಾನ ತಂಡ ಈ ಬಾರಿ ಲೀಗ್ ಹಂತದಲ್ಲೆ ಹೊರಬಿದ್ದಿದೆ. ಕೊನೇ ಪಂದ್ಯವನ್ನು ಗೆಲ್ಲುವ ಮೂಲಕ ಕೊಂಚ ನಿರಾಳವಾಗಿದೆ.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆನಡಾ ತಂಡದ ವಿರುದ್ಧ 82 ರನ್‌ಗಳ ಜಯ ದಾಖಲಿಸಿದೆ. ಟಾಸ್ ಗೆದ್ದ ಕೆನಡಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: ಬಬಲಾದಿ ಭವಿಷ್ಯವಾಣಿ: “ಅತಿ ದೊಡ್ಡ ದುಃಖದ ಸುದ್ದಿ ಬಂದೀತಣ್ಣ”
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಇಬ್ರಾಹಿಂ ಜದ್ರಾನ್ ಅವರ ಅಮೋಘ 95 ರನ್, ಸೆದಿಕುಲ್ಲಾ ಅಟಲ್ 44, ರಹನ್ನುಲ್ಲಾ ಗುರ್ಬಾಜ್ 30 ರನ್ ನೆರವಿನಿಂದ 200 ರನ್ ದಾಖಲಿಸಿತು. ಕೆನಡಾ ಪರ ಜಸ್ಕರನ್ ಸಿಂಗ್ 3, ದಿಲೋನ್ ಹೆಯ್ಲಿಂಗರ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಕೆನಡಾ ತಂಡ 8 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಶಕ್ತವಾಯ್ತು. ತಂಡದ ಪರ ಹರ್ಶ್ ಟಾಕೇರ್ 30, ಸಾದ್ ಬಿನ್ ಜಾಫರ್ 28, ಯುವರಾಜ್ ಸಮ್ರ 17 ರನ್ ಗಳಿಸಿದರು. ಅಫ್ಘಾನ್ ಪರ ಮೊಹಮ್ಮದ್ ನಬಿ 4, ರಶೀದ್ ಖಾನ್ 2, ಮುಜೀಬ್ ಅರ್ ರೆಹಮಾನ್ ಮತ್ತು ಅಮ್ಜತುಲ್ಲಾ ಒಮರ್‌ಝೈ ತಲಾ ಒಂದು ವಿಕೆಟ್ ಪಡೆದರು.
ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು ಅಪ್ಘಾನಿಸ್ತಾನ ವಿಶ್ವಕಪ್ ಅಭಿಯಾನ ಪೂರ್ಣಗೊಳಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

