ಬಬಲಾದಿ ಭವಿಷ್ಯವಾಣಿ: “ಅತಿ ದೊಡ್ಡ ದುಃಖದ ಸುದ್ದಿ ಬಂದೀತಣ್ಣ”

ವಿಜಯಪುರ: ಕಾಲಜ್ಞಾನ ಮತ್ತು ಬೆಂಕಿ ಭವಿಷ್ಯಕ್ಕೆ ಹೆಸರಾಗಿರುವ ಬಬಲಾದಿ ಮಠದ ಸದಾಶಿವ ಮುತ್ಯಾರ ಜಾತ್ರೆಯ ಸಂದರ್ಭದಲ್ಲಿ ಈ ವರ್ಷದ ಭವಿಷ್ಯವನ್ನು ಪ್ರಕಟಿಸಲಾಗಿದೆ. ಪರಾಭವನಾಮ ಸಂವತ್ಸರದಲ್ಲಿ ಜಗತ್ತು ಮತ್ತು ರಾಜ್ಯವು ಎದುರಿಸಲಿರುವ ಏರಿಳಿತಗಳ ಬಗ್ಗೆ ಮಠವು ಎಚ್ಚರಿಕೆ ನೀಡಿದೆ. ಈ ಬಾರಿಯ ಭವಿಷ್ಯವಾಣಿಯಲ್ಲಿ “ಅತಿ ದೊಡ್ಡ ದುಃಖದ ಸುದ್ದಿ ಬಂದೀತಣ್ಣ” ಎಂಬ ಆಘಾತಕಾರಿ ವಾಕ್ಯವಿದೆ. ಇದು ದೇಶಕ್ಕೆ ಅಥವಾ ಲೋಕಕ್ಕೆ ಸಂಬಂಧಿಸಿದ ಯಾವುದೋ ದೊಡ್ಡ ಮಟ್ಟದ ಆಘಾತ ಅಥವಾ ಗಣ್ಯ ವ್ಯಕ್ತಿಯೊಬ್ಬರ ನಿಧನ ಅಥವಾ ದೊಡ್ಡ ದುರಂತದ ಮುನ್ಸೂಚನೆ ಎಂದು ಭಕ್ತರು ವ್ಯಾಖ್ಯಾನಿಸುತ್ತಿದ್ದಾರೆ.

ಕರ್ನಾಟಕದ ರಾಜಕೀಯದಲ್ಲಿ “ಹೊಸ ತಿರುವು” ಮತ್ತು ದೊಡ್ಡ ಮಟ್ಟದ ಬದಲಾವಣೆಗಳು ಸಂಭವಿಸಲಿವೆ. ಅಧಿಕಾರ ವರ್ಗಾವಣೆಯ ಸುಳಿವನ್ನು ಇದು ನೀಡುತ್ತಿದೆ ಎನ್ನಲಾಗಿದೆ.ದೇಶದ ಗಡಿ ಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಲಿದೆ. ಯುದ್ಧದ ಭೀತಿ ಮತ್ತು ನೆರೆ ರಾಷ್ಟ್ರಗಳೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆಯಿದೆ. ಈ ವರ್ಷ ಅಗ್ನಿ ಅನಾಹುತಗಳು ಮತ್ತು ಅತಿ ವೇಗವಾಗಿ ಬೀಸುವ ಗಾಳಿಯಿಂದ ತೊಂದರೆಯಾಗಲಿದೆ. “ಕೆಂಡಮಂಡಲದಂತಹ ಪರಿಸ್ಥಿತಿ” ನಿರ್ಮಾಣವಾಗಬಹುದು.

ಇದನ್ನೂ ಓದಿ: ಮತ್ತೋರ್ವ ಕನ್ನಡಿಗ ವಿದೇಶದಲ್ಲಿ ಸಾವು: ಐರ್ಲೆಂಡ್‌ನಲ್ಲಿ ಕಡಬದ ಯುವಕ ಸಾಂಜೋ ಸುನಿಲ್ ಶವವಾಗಿ ಪತ್ತೆ

ವಿಶ್ವದ ಹಲವೆಡೆ ಭೂಕುಸಿತಗಳು ಮತ್ತು ನೈಸರ್ಗಿಕ ವಿಪತ್ತುಗಳ ಪ್ರಮಾಣ ಹೆಚ್ಚಾಗಲಿದೆ. ಈ ವರ್ಷ ಉತ್ತಮ ಮಳೆಯಾಗಲಿದೆ. ಮುಂಗಾರು ಮಳೆ 7 ಆಣೆ ಮತ್ತು ಹಿಂಗಾರು ಮಳೆ 9 ಆಣೆ ಆಗಲಿದೆ ಎಂದು ಲೆಕ್ಕ ಹಾಕಲಾಗಿದೆ. ಕೆಲವು ಕಡೆ ಅತಿವೃಷ್ಟಿಯಿಂದ ಪ್ರವಾಹ ಬಂದರೂ, ಜನ-ಜಾನುವಾರುಗಳಿಗೆ ಅಥವಾ ಆಸ್ತಿಗೆ ಅಂತಹ ಭಾರಿ ನಷ್ಟದ ಭಯವಿಲ್ಲ ಎಂದು ಅಭಯ ನೀಡಲಾಗಿದೆ. ಈ ವರ್ಷ ಚಿಕ್ಕ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚು ಕಾಡಬಹುದು, ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗುವ ಸಂಕೇತಗಳಿವೆ ಎಂದು ಭವಿಷ್ಯ ತಿಳಿಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.co

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು