T20 Worldcup: ಯುಎಇ ವಿರುದ್ಧ ಸುಲಭ ಜಯ ದಾಖಲಿಸಿದ ಅಪ್ಘಾನಿಸ್ತಾನ

ದೆಹಲಿ: ಟಿ-20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಯುಎಇ ತಂಡದ ವಿರುದ್ಧ 5 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಯುಎಇ ತಂಡ 9 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

ಇದನ್ನೂ ಓದಿ: ಕಾಂಗ್ರೆಸ್​​​​​ ಪಕ್ಷಕ್ಕೆ ಬಿಗ್​ ಶಾಕ್​​ ನೀಡಿದ ಹೈಕೋರ್ಟ್; ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು

ತಂಡದ ಪರ ಶೋಯಬ್ ಖಾನ್ 68, ಅಲಿಶಾನ್ ಶರಫು 40, ಹೈದರ್ ಅಲಿ ಮತ್ತು ಸೈಯದ್ ಹೈದರ್ ತಲಾ 13 ರನ್ ಗಳಿಸಿದರು. ಅಫ್ಘಾನ್ ಪರ ಅಮ್ಜತುಲ್ಲಾ ಒಮರ್‌ಝೈ 4, ಮುಜೀಬ್ ಉರ್ ರೆಹಮಾನ್ 2, ರಶೀದ್ ಖಾನ್ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 19.5 ಓವರ್‌ಗಳಲ್ಲಿ ಗುರಿ ತಲುಪಿತು. ತಂಡದ ಪರ ಇಬ್ರಾಹಿಂ ಜದ್ರಾನ್ 53, ಅಮ್ಜತುಲ್ಲಾ ಒಮರ್‌ಝೈ 40, ದ್ವಾರಿಷ್ ರಸೂಲಿ 33, ಸೆದಿಕುಲ್ಲ ಅಟಲ್ 16 ರನ್ ಗಳಿಸಿದರು. ಯುಎಇ ಪರ ಜುನೈದ್ ಸಿದ್ದಿಕಿ ಮತ್ತು ಮುಹಮ್ಮದ್ ಅರ್ಫನ್ ತಲಾ 2 ವಿಕೆಟ್, ಮುಹಮ್ಮದ್ ಜವಾದುಲ್ಲ ಒಂದು ವಿಕೆಟ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು