7 ವರ್ಷಗಳ ಬಳಿಕ ಇರಾನ್ ತೈಲ ಖರೀದಿಸಿದ ಭಾರತ! ಇಲ್ಲಿದೆ ಸಂಪೂರ್ಣ ಮಾಹಿತಿ 

ನವದೆಹಲಿ:  ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯ ನಡುವೆ ಭಾರತವು ಮಹತ್ವದ ಹೆಜ್ಜೆ ಇಟ್ಟಿದ್ದು, ಸುಮಾರು 7 ವರ್ಷಗಳ ಬಳಿಕ ಮೊದಲ ಬಾರಿಗೆ ಇರಾನ್‌ನಿಂದ ಕಚ್ಚಾ ತೈಲವನ್ನು ಖರೀದಿಸಿದೆ. ಭಾರತವು ಕೊನೆಯ ಬಾರಿ 2019ರಲ್ಲಿ ಇರಾನ್‌ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು. ಆಗ ಅಮೆರಿಕ ವಿಧಿಸಿದ್ದ ನಿರ್ಬಂಧಗಳ ಕಾರಣದಿಂದ ಈ ವಹಿವಾಟು ಸಂಪೂರ್ಣವಾಗಿ ನಿಂತಿತ್ತು.

ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ನಡೆದ ಯುದ್ಧ ಮತ್ತು ಹೋರ್ಮುಜ್ ಜಲಸಂಧಿಯ ಅಡಚಣೆಗಳಿಂದ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಭಾರತ ಮತ್ತೆ ಇರಾನ್ ಕಡೆ ಮುಖ ಮಾಡಿದೆ.

ಇದನ್ನೂ ಓದಿ: IPl: ಬಿಷ್ಣೋಯಿ ಘಾತಕ ಬೌಲಿಂಗ್; ಧ್ರುವ್ ಮಿಂಚಿನ ಆಟ, ರೋಚಕ‌ ಪಂದ್ಯದಲ್ಲಿ ಕೈ ಚೆಲ್ಲಿದ ಗುಜರಾತ್, ರಾಜಸ್ಥಾನಕ್ಕೆ ಗೆಲುವು

ಪೆಟ್ರೋಲಿಯಂ ಸಚಿವಾಲಯದ ಮಾಹಿತಿ ಪ್ರಕಾರ, “ಭಾರತೀಯ ರಿಫೈನರಿ ಸಂಸ್ಥೆಗಳು ತಮ್ಮ ತೈಲ ಅಗತ್ಯಗಳನ್ನು ಭದ್ರಪಡಿಸಿಕೊಂಡಿದ್ದು, ಇರಾನ್‌ನಿಂದಲೂ ತೈಲ ಖರೀದಿಸಲಾಗಿದೆ. ಈ ವ್ಯವಹಾರದಲ್ಲಿ ಯಾವುದೇ ಪಾವತಿ ಸಮಸ್ಯೆಯೂ ಇಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ಇದಕ್ಕೂ ಮೊದಲು, ಅಮೆರಿಕ ತಾತ್ಕಾಲಿಕವಾಗಿ ಇರಾನ್ ತೈಲದ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿದ್ದು, ಜಾಗತಿಕ ತೈಲ ಕೊರತೆಯನ್ನು ತಗ್ಗಿಸಲು ಈ ಕ್ರಮ ಕೈಗೊಂಡಿತ್ತು.

ಭಾರತವು ಪ್ರಪಂಚದ ಮೂರನೇ ಅತಿ ದೊಡ್ಡ ತೈಲ ಬಳಕೆದಾರ ರಾಷ್ಟ್ರವಾಗಿದ್ದು, 40ಕ್ಕೂ ಹೆಚ್ಚು ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ತೈಲ ಮೂಲಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಭಾರತೀಯ ಕಂಪನಿಗಳಿಗೆ ಇದೆ ಎಂದು ಸರ್ಕಾರ ತಿಳಿಸಿದೆ. ಇದಲ್ಲದೆ, ಭಾರತವು ಇತ್ತೀಚೆಗೆ ಇರಾನ್‌ನಿಂದ 44,000 ಮೆಟ್ರಿಕ್ ಟನ್ ಎಲ್‌ಪಿಜಿ ಗ್ಯಾಸನ್ನೂ ಖರೀದಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು